ಬೆಂಗಳೂರು ಕಸದಲ್ಲಿ 36 ಸಾವಿರ ಕೋಟಿ ರೂ. ಲೂಟಿ ಆರೋಪ: ಬಿಜೆಪಿಗೆ ಡಿಕೆಶಿ ಓಪನ್ ಚಾಲೆಂಜ್

Updated on: Jun 10, 2026 | 10:09 PM

ಇಡೀ ಬೆಂಗಳೂರೇ ಬೆಚ್ಚಿಬೀಳೋ ದೊಡ್ಡ ಹಗರಣದ ದಾಖಲೆಯನ್ನ ವಿಪಕ್ಷ ನಾಯಕ ಆರ್​.ಅಶೋಕ್​ ರಿಲೀಸ್ ಮಾಡಿದ್ದಾರೆ. ಕಸದ ಹೆಸರಿನಲ್ಲಿ 36 ಸಾವಿರ ಕೋಟಿ ರೂ. ಲೂಟಿ ಮಾಡಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಮರ ಸಾರಿದ್ದು, ಈ ಸಂಬಂಧ ಬಿಜೆಪಿ, ಸಿಬಿಐ ತನಿಖೆ ಆಗಬೇಕೆಂದು ರಾಜ್ಯಪಾಲ ಹಾಗೂ ಲೋಕಾಯುಕ್ತಕ್ಕೂ ದೂರು ನೀಡಿದೆ. ಇನ್ನು ಈ ಆರೋಪಕ್ಕೆ ಸ್ವತಃ ಸಿಎಂ ಡಿಕೆ ಶಿವಕುಮಾರ್ ಖಡಕ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು, (ಜೂನ್ 10): ಸಿಲಿಕಾನ್ ಸಿಟಿ ಬೆಂಗಳೂರು ನಗರದ ಕಸದ ಗೋಲ್ಮಾಲ್​ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ದಾಖಲೆ ಬಿಚ್ಚಿಟ್ಟಿದ್ದಾರೆ. ಕಸ ಸಂಸ್ಕರಣೆಗೆ ಒಂದು ಟನ್​ಗೆ 260 ರೂಪಾಯಿ ಖರ್ಚಾಗುತ್ತೆ. ಆದ್ರೆ ಸರ್ಕಾರ ಕೊಡ್ತಿರೋದು 2012 ರೂಪಾಯಿ ಆಗಿದೆ. 30 ವರ್ಷಗಳಲ್ಲಿ 39 ಸಾವಿರ ಕೋಟಿ ರೂಪಾಯಿ ಹಣ ಕೊಡಲಾಗುತ್ತಿದ್ದು. ಟೆಂಡರ್​​ನಲ್ಲಿ ದೊಡ್ಡ ಗೋಲ್ಮಾಲ್ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ರಾಜ್ಯಪಾಲರು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ. ಇನ್ನು ಈ ಆರೋಪವನ್ನು ಸ್ವತಃ ಡಿಕೆ ಶಿವಕುಮಾರ್ ಅಲ್ಲಗಳೆದಿದ್ದು, ಕುಮಾರಸ್ವಾಮಿ ಕೂಡಾ ಹಿಂದೆ ಇದನ್ನೆ ಮಾತನಾಡಿದ್ದರು. ಕಸದ್ದು ದೊಡ್ಡ ಲಾಭಿ ಇದೆ. ಅವರ ಕಾಲದಲ್ಲಿ ಟೆಂಡರ್ ಮಾಡಲಿಲ್ಲ. ಅವರು ಯಾವ ತನಿಖೆ ಬೇಕಾದರೂ ಮಾಡಲಿ ಎಂದು ಸವಾಲು ಹಾಕಿದರು.

ಕಸದಲ್ಲಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ಕಸದಿಂದ ಪವರ್ ಮಾಡಲು ಟೆಂಡರ್ ಮಾಡಿದ್ದೆವು. ಯಾರು ಬರಲಿಲ್ಲ, ಅವರ ಸರ್ಕಾರ ಇದ್ದಾಗ ಯಾಕೆ ಮಾಡಲಿಲ್ಲ.ಬೇರೆ ಬೇರೆ ರಾಜ್ಯಗಳಲ್ಲಿ ನೋಡಿ ಈ ತಿರ್ಮಾನ ಮಾಡಿದೆ. ಅವರು ಆರು ಸಾವಿರ ಕೋಟಿ ಹೂಡಿಕೆ ಮಾಡುತ್ತಿದ್ದಾರೆ.ದೊಡ್ಡ ಬಳ್ಳಾಪುರದಲ್ಲಿ ಜಾಗ ನೋಡಿದ್ದೇನೆ. ಕ್ಷೇತ್ರದಲ್ಲಿ ಕಸ ಹಾಕುವ ವಿಚಾರದಲ್ಲಿ ಸಾಕಷ್ಟು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಕಸದೊಂದು ಮಾಫಿಯ, ಅದರ ವಕ್ತಾರಾಗಿ ಆರ್ ಅಶೋಕ್ ಮಾತನಾಡುತ್ತಿದ್ದಾರೆ. ಅವರು ಯಾವ ತನಿಖೆ ಬೇಕಾದರೂ ಮಾಡಲಿ. ಸಾವಿರಾರು ಅಲ್ಲ ಹತ್ತು ಕೋಟಿ ಆದರೂ ತನಿಖೆ ಮಾಡಲಿ. ನಾನು ಸಿಎಂ ಆಗಿದ್ದು ಅವರಿಗೆ ತಡೆದುಕೊಳ್ಳಲು ಆಗ್ತಿಲ್ಲ. ಕೋರ್ಟ್ ನಮ್ಮ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: ಕಸದ ಟೆಂಡರ್​​ನಲ್ಲಿ ಅಕ್ರಮ ಆರೋಪ: ರಾಜ್ಯಪಾಲ ಗೆಹ್ಲೋಟ್​ಗೆ ಬಿಜೆಪಿ ನಿಯೋಗದಿಂದ ದೂರು

Published on: Jun 10, 2026 10:08 PM
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More