ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ: ವಿಜಯ್ಗೆ ಡಿಕೆಶಿ ಖಡಕ್ ಕೌಂಟರ್
ಮುಖ್ಯಾಂಶಗಳು
- ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಸಿಎಂ ವಿಜಯ್ ಮನವಿ
- ಹಾಸನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ
- ಕೇಂದ್ರದ ಒಪ್ಪಿಗೆಗಿಂತ ಸುಪ್ರೀಂಕೋರ್ಟ್ ಅನುಮತಿ ಕೊಟ್ಟಿದೆ
ಮೇಕೆದಾಟು ಯೋಜನೆಗೆ ತಮಿಳುನಾಡು ಮುಖ್ಯಮಂತ್ರಿ ಅನುಮತಿ ನಿರಾಕರಿಸಿದ ಪತ್ರಕ್ಕೆ ಸಿಎಂ ಡಿಕೆ ಶಿವಕುಮಾರ್ ಖಡಕ್ ಉತ್ತರ ನೀಡಿದ್ದಾರೆ. ಮೇಕೆದಾಟು ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ ಎಂದ ಅವರು, ಸುಪ್ರೀಂ ಕೋರ್ಟ್ ಈಗಾಗಲೇ ಅನುಮತಿ ನೀಡಿದ್ದು, ತಮಿಳುನಾಡಿನ ಸಹಕಾರ ಮಾತ್ರ ಅಗತ್ಯ ಎಂದು ತಿಳಿಸಿದ್ದಾರೆ.
ಹಾಸನ, ನವೆಂಬರ್ 08: ಮೇಕೆದಾಟು ಯೋಜನೆಗೆ ಅನುಮತಿ ಪ್ರಧಾನಿ ನರೇಂದ್ರ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಪತ್ರ ಬರೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್, ‘ನಮಗೆ ತಮಿಳುನಾಡು ಅನುಮತಿ ಬೇಡ, ಸಹಕಾರ ಬೇಕಷ್ಟೇ’ ಎಂದಿದ್ದಾರೆ. ಹಾಸನಾಂಬೆ ದರ್ಶನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಕೇಂದ್ರದ ಒಪ್ಪಿಗೆಗಿಂತ ಸುಪ್ರೀಂಕೋರ್ಟ್ ಅನುಮತಿ ಕೊಟ್ಟಿದೆ. ಇದು ಕರ್ನಾಟಕದ ಹಕ್ಕು ಎಂದು ಹೇಳಿದೆ. ಪರಿಸರ ಇಲಾಖೆ ಅನುಮತಿ ಬೇಕು, ಅದು ಬಿಟ್ರೆ ಬೇರೆ ಏನಿಲ್ಲ. ಎಲ್ಲ ಪಕ್ಷದವರು, ನಮ್ಮ ಸಂಸದರು ಸಹಕರಿಸ್ತೇವೆ ಅಂದಿದ್ದಾರೆ. ತಮಿಳುನಾಡಿನವರ ಪರಿಶೀಲನಾ ಅರ್ಜಿ ಕೂಡ ತಿರಸ್ಕರಿಸಿದೆ. ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಇದನ್ನ ಗಮನಿಸಬೇಕು’ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
