ಸುರ್ಜೇವಾಲಾ ನೀಡಿದ ಮಾಹಿತಿಯನ್ನು ಆಧರಿಸಿ ಶಾಸಕರೊಂದಿಗೆ ಮುಖ್ಯಮಂತ್ರಿ ಸಭೆ ನಡೆಸುತ್ತಿದ್ದಾರೆ: ಶಿವಕುಮಾರ್
ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಮೊದಲು ಅವರು ತಮ್ಮ ಪಕ್ಷದ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದು ಹೇಳಿ, ಅಧಿಕಾರಿಗಳೊಂದಿಗೆ ಇವತ್ತು ಮೀಟಿಂಗ್ ನಡೆಸಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಬೇಕಿದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಲಾಗಿದೆ, ಆಡಳಿತಾತ್ಮಕ ಅಂಶಗಳನ್ನು ಸುರಳೀತಗೊಳಿಸಲು ಮತ್ತು ನಗರದ ಹಿತಾಸಕ್ತಿಗೋಸ್ಕರ ಬಿಬಿಎಂಪಿಯನ್ನು ವಿಂಗಡಿಸಿದ್ದೇವೆ ಎಂದರು.
ಬೆಂಗಳೂರು, ಜುಲೈ 29: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಇಂದು ಪಕ್ಷದ ಶಾಸಕರೊಂದಿಗೆ ಸಭೆ ನಡೆಸುತ್ತಿದ್ದಾರೆ, ಬೆಂಗಳೂರು ಶಾಸಕರ ಸಭೆ ನಂತರ ನಡೆಯಲಿದೆ, ಆದರೆ ಪಾರ್ಟಿ ಅಧ್ಯಕ್ಷ ಡಿಕೆ ಶಿವಕುಮಾರ್ ಇವತ್ತಿನ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಯಾಕೆ ಅಂತ ಕೇಳಿದರೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಶಾಸಕರೊಂದಿಗೆ ಮಾತುಕತೆ ನಡೆಸಿ ವಿವರಗಳನ್ನು ಮುಖ್ಯಮಂತ್ರಿಯವರಿಗೆ ನೀಡಿದ್ದಾರೆ, ಅವರು ನೀಡಿರುವ ಇನ್ಪುಟ್ಸ್ ಆಧರಿಸಿ ಮುಖ್ಯಮಂತ್ರಿಯವರು ಶಾಸಕರ ಕುಂದು ಕೊರತೆಗಳನ್ನು ವಿಚಾರಿಸಲಿದ್ದಾರೆ ಎಂದು ಹೇಳಿದರು. ಸಭೆಗೆ ಹೋಗದಿರುವುದು ಮಾಧ್ಯಮದವರಿಗೆ ಹೆಚ್ಚಿನ ಕುತೂಹಲ ಮೂಡಿಸಿದಂತಿದೆ ಅಂತ ಶಿವಕುಮಾರ್ ಹೇಳಿದಾಗ; ಪತ್ರಕರ್ತರೊಬ್ಬರು ಯಾಕೆ ಸಭೆಗೆ ಹೋಗಿಲ್ಲ ಅಂತ ಕೇಳೋದು ತಪ್ಪಾ ಸರ್ ಅಂದಾಗ, ಡಿಸಿಎಂ ಕನ್ನಡದಲ್ಲಿ ಹೇಳಿದ್ದನ್ನೇ ಇಂಗ್ಲಿಷ್ನಲ್ಲಿ ಹೇಳುತ್ತಾರೆ.
ಇದನ್ನೂ ಓದಿ: ಒಂದು ವಾರದಿಂದ ಡಿಸಿಎಂ ಟೆಂಪಲ್ ರನ್: ಸಿಎಂ ಗಾದಿಗಾಗಿ ರಹಸ್ಯ ಪೂಜೆ ಮಾಡಿದ್ರಾ ಡಿಕೆ ಶಿವಕುಮಾರ್?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ