Loading video

ಬಿಜೆಟ್ ಪೂರ್ವಭಾವಿ ಸಭೆಯಲ್ಲಿ ಭಾಗಿಯಾಗಲು ವಿಧಾನಸೌಧದೊಳಗೆ ವ್ಹೀಲ್ ಚೇರ್​ನಲ್ಲಿ ಹೋದ ಸಿಎಂ ಸಿದ್ದರಾಮಯ್ಯ

|

Updated on: Feb 20, 2025 | 6:59 PM

ಒಂದು ವಾರದೊಳಗೆ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತೇನೆ, ವ್ಹೀಲ್ ಚೇರ್ ಬಿಟ್ಟು ಓಡಾಡುತ್ತೇನೆ ಅಂತ ಸಿದ್ದರಾಮಯ್ಯ 2-3 ದಿನಗಳ ಹಿಂದೆ ಹೇಳಿದ್ದರು. ಅವರು ರಾಜ್ಯದ ಮುಂಗಡ ಪತ್ರವನ್ನು ಮಾರ್ಚ್ 7ರಂದು ಮಂಡಿಸಲಿದ್ದಾರೆ. ನಾವು ಈಗಾಗಲೇ ವರದಿ ಮಾಡಿರುವ ಹಾಗೆ ವಿಧಾನಮಂಡಲದ ಬಜೆಟ್ ಅಧಿವೇಶನ ಮಾರ್ಚ್​ 3ರಂದು ಆರಂಭಗೊಳ್ಳಲಿದೆ. ತಮ್ಮ ಕಾಲುಗಳ ಮೇಲೆ ತಾವು ನಿಂತು ಸಿದ್ದರಾಮಯ್ಯ ಬಜೆಟ್ ಮಂಡಿಸಿಯಾರೇ?

ಬೆಂಗಳೂರು: ಕಳೆದ 20ದಿನಗಳಿಂದ ವ್ಹೀಲ್ ಚೇರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಗಾತಿಯಾಗಿದೆ. ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿರುವ ಅವರು ಸಭೆಗಳಿಗೆ ವ್ಹೀಲ್ ಚೇರ್ ನಲ್ಲಿ ಬರುತ್ತಿದ್ದಾರೆ. ಇವತ್ತು ಮಧ್ಯಾಹ್ನ ಬಿಜೆಟ್ ಪೂರ್ವ ಸಭೆಯಲ್ಲಿ ಪಾಲ್ಗೊಳ್ಳಲು ಅವರು ಯಾವುದೋ ಖಾಸಗಿ ಕಾರಲ್ಲಿ ವಿಧಾನ ಸೌಧಕ್ಕೆ ಅಗಮಿಸಿದರು. ಸೌಧದ ರ‍್ಯಾಂಪ್ ನಲ್ಲಿ ಸಿದ್ದರಾಮಯ್ಯನವರಿಗಾಗಿ ಒಂದು ವ್ಹೀಲ್ ಚೇರನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು. ಅವರು ಅಲ್ಲಿಗೆ ಬಂದಾಗ ಮುಕ್ಕುರುವ ಸಿಬ್ಬಂದಿ ಮತ್ತು ಅಧಿಕಾರಿ ವರ್ಗವನನ್ನು ನೋಡಿ, ಮುಖ್ಯಮಂತ್ರಿ ಕಾಣೋದೇ ಇಲ್ಲ! ಅವರು ಲಿಫ್ಟ್ ನಲ್ಲಿ ಹೋದಾಗ ಯಾವನೋ ಒಬ್ಬ ಯೂ ಆರ್ ದಿ ಬೆಸ್ಟ್ ಚೀಫ್ ಆಫ್ ಕರ್ನಾಟಕ ಸರ್ ಅಂತ ಜೋರಾಗಿ ಕೂಗು ಹಾಕುತ್ತಾನೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಅರೇ..ಏನಾಯ್ತು..!ವ್ಹೀಲ್​ ಚೇರ್​ನಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶಕ್ಕೆ ಬಂದ ಸಿಎಂ