ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೆ ಭುಸುಗುಡುತ್ತಾ ಮಾಜಿ ಸಚಿವನ ಮನೆಯೊಳಗೆ ಹೋದ ಬಸನಗೌಡ ಯತ್ನಾಳ್
ಮಾಧ್ಯಮದವರನ್ನು ಎದುರಿಸಲಾಗದೆ ಬಸನಗೌಡ ಪಾಟೀಲ್ ಮನೆಯೊಳಗೆ ಹೋಗುವುದು ವಿಚಿತ್ರವೆನಿಸುತ್ತದೆ ನಗೆಯನ್ನೂ ಹುಟ್ಟಿಸುತ್ತದೆ. ಮಾಜಿ ಸಂಸದ ಪ್ರತಾಪ್ ಸಿಂಹ ಅಣ್ಣ ಅಣ್ಣ ಅನ್ನುತ್ತ ಬ್ಯಾಲೆನ್ಸಿಂಗ್ ಆ್ಯಕ್ಟ್ ಮಾಡುವ ಪ್ರಯತ್ನ ಮಾಡುತ್ತಾರೆ. ಮಾಧ್ಯಮದವರೊಬ್ಬರು ಹೇಳುವ ಹಾಗೆ ಮಾಡಿದ ಕರೆಗಳಿಗೆ ಮತ್ತು ಟೆಕ್ಸ್ಟ್ ಸಂದೇಶಗಳಿಗೆ ಉತ್ತರಿಸುವ ಕೆಲಸವನ್ನು ಯತ್ನಾಳ್ ಮಾಡಿಲ್ಲ, ಯಾಕೆ ಅಂತ ಕೇಳಿದ್ರೆ ಮೈತುಂಬಾ ಉರಿ!
ಬೆಂಗಳೂರು: ಎಲ್ಲ ಸರಿಯಿದ್ದಾಗ ಮಾಧ್ಯಮದವರನ್ನು ಕರೆದು ಹೇಳಿಕೆ ನೀಡೋದು, ಒತ್ತಡದಲ್ಲಿದ್ದಾಗ ಅದೇ ಮಾಧ್ಯಮದವರ ಮೇಲೆ ಹರಿಹಾಯುವುದು-ಇದು ರೆಬೆಲ್ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವರಸೆ. ಮಾಧ್ಯಮದವರು ಅವರಿಗೆ ಕೇಳಬಾರದ್ದೇನೂ ಕೇಳಲಿಲ್ಲ, ಕೇಂದ್ರ ಶಿಸ್ತು ಸಮಿತಿ ನೀಡಿದ ನೋಟೀಸ್ ಗೆ ಉತ್ತರ ಕೊಟ್ರಾ ಅಂತ ಕೇಳಿದ್ದು. ಅಷ್ಟಕ್ಕೆ ಯತ್ನಾಳ್ ಸಾಹೇಬರು ದೂರ್ವಾಸ ಮುನಿಗಳಾದರು. ಇಷ್ಟು ದಿನ ವಿಜಯೇಂದ್ರ ಮೇಲಿನ ಸಿಟ್ಟನ್ನು ಮಾಧ್ಯಮಗಳ ಮೂಲಕ ಹೊರಹಾಕುತ್ತಿದ್ದರು. ಈಗ ಅದಕ್ಕೆ ಕತ್ತರಿ ಬಿದ್ದಿದೆ. ಮಾಧ್ಯಮಗಳ ಮುಂದೆ ಪುನಃ ಬಾಯಿ ತೆರೆಯುವ ಕೆಲಸ ಮಾಡಿದರೆ ಬಾಲ ಕತ್ತರಿಸುತ್ತೇವೆ ಅಂತ ಪ್ರಾಯಶಃ ದೆಹಲಿ ನಾಯಕರು ಹೇಳಿರಬಹುದು. ವಿಜಯೇಂದ್ರನ ಬಗ್ಗೆಯಂತೂ ಮಾತಾಡುವಂತಿಲ್ಲ, ಹಾಗಾಗಿ ಮಾಧ್ಯಮದವರ ಮೇಲೆ ಕೂಗಾಡಿದರಾಯಿತು ಎಂದು ಶಾಸಕ ಅಂದುಕೊಂಡಿರಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವಿಜಯೇಂದ್ರ ಮೃದು ಧೋರಣೆ ಪ್ರದರ್ಶಿಸುತ್ತಿದ್ದರೂ ಮತ್ತೊಮ್ಮೆ ಸಭೆ ಸೇರಿದ ಬಸನಗೌಡ ಯತ್ನಾಳ್ ತಂಡ