ಕ್ವೆಸ್ಟ್ ಅಕಾಡೆಮಿಯ ಕನ್ನಡ ಅನುವಾದವನ್ನು ಪರಮೇಶ್ವರ್ ಅವರಿಂದ ಕೇಳಿ ತಿಳಿದುಕೊಂಡ ಸಿದ್ದರಾಮಯ್ಯ

|

Updated on: Nov 22, 2024 | 6:43 PM

ತಮ್ಮ ಭಾಷಣದಲ್ಲಿ ಶಿಕ್ಷಣದ ಮಹತ್ವವನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ನಾವು ಏನು ಆಗಿದ್ದೆವು, ಈಗ ಏನಾಗಿದ್ದೇವೆ ಮತ್ತು ಮುಂದೇನಾಗಲಿದ್ದೇವೆ ಎಂಬ ಈ ಮೂರು ಅಂಶಗಳನ್ನು ಅರ್ಥ ಮಾಡಿಕೊಂಡರೆ ನಾವು ಪಡೆಯುವ ಶಿಕ್ಷಣ ಸಾರ್ಥಕವಾದಂತೆಯೇ ಎಂದು ಹೇಳಿದರು.

ಮೈಸೂರು: ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಹೊಸ ಶಾಲೆ ಕ್ವೆಸ್ಟ್ ಅಕಾಡೆಮಿಯನ್ನು ಇಂದು ನಗರದಲ್ಲಿ ಉದ್ಘಾಟಿಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸ್ಥೆಯ ಚೇರ್ಮನ್ ಆಗಿರುವ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಶುಭ ಹಾರೈಸಿದರು. ಅಗತ್ಯಬಿದ್ದರೆ ಮಾತ್ರ ಇಂಗ್ಲಿಷ್ ನಲ್ಲಿ ಮಾತಾಡುವ ಮುಖ್ಯಮಂತ್ರಿಯವರಿಗೆ ಕ್ವೆಸ್ಟ್ ಅಕಾಡೆಮಿಗೆ ಕನ್ನಡದಲ್ಲಿ ಏನು ಹೇಳಬಹುದು ಅನ್ನೋದು ಕೂಡಲೇ ಗೊತ್ತಾಗಲಿಲ್ಲ. ಹಾಗಾಗೇ ಅವರು ವೇದಿಕೆ ಮೇಲಿದ್ದ ಪರಮೇಶ್ವರ್ ಅವರನ್ನು ಕೇಳಿದರು. ಅನ್ವೇಷಣೆ ವಿದ್ಯಾಸಂಸ್ಥೆ ಅನ್ನಬಹುದು ಅನ್ನೋದನ್ನು ಕಂಡುಕೊಂಡು ಸಿದ್ದರಾಮಯ್ಯ ತಮ್ಮ ಮಾತು ಮುಗಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಜರ್ಮನ್ ಕಂಪನಿಗಳಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ