ಮೈಸೂರು: ವಕೀಲರ ರಕ್ಷಣಾ ಕಾಯ್ದೆ ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸುವ ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ವಕೀಲರ ಪ್ರಮುಖ ಬೇಡಿಕೆಯಾಗಿರುವ ವಕೀಲರ ರಕ್ಷಣಾ ಕಾಯ್ದೆಯನ್ನು ಮೊದಲ ಅಧಿವೇಶನದಲ್ಲೇ ಜಾರಿಗೊಳಿಸುವ ಇರಾದೆ ತಮ್ಮಲ್ಲಿತ್ತು ಅದರೆ ಕಾರಣಾಂತರಗಳಿಂದ ಅದನ್ನು ಮಾಡಲಾಗಲಿಲ್ಲ, ಮುಂದಿನ ಅಧಿವೇಶನಲ್ಲಿ ಖಂಡಿತ ಜಾರಿಗೊಳಿಸಲಾಗುವುದು ಎಂದು ವಕೀಲರಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.
ಮೈಸೂರು: ನಗರದಲ್ಲಿಂದು ಹತ್ತನೇ ರಾಜ್ಯಮಟ್ಟದ ವಕೀಲರ ಸಮಾವೇಶದಲ್ಲಿ (State Level Lawyers Convention) ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಬಹಳ ಸಂತೋಷ ಮತ್ತು ಲವಲವಿಕೆಯಿಂದ ಮಾತಾಡಿದರು. ಅದಕ್ಕೆ ಕಾರಣ ಇಲ್ಲದಿಲ್ಲ. ಅದನ್ನು ಅವರೇ ಹೇಳಿದರು. ರಾಜಕಾರಣಕ್ಕೆ ಧುಮುಕುವ ಮೊದಲು ಸಿದ್ದರಾಮಯ್ಯ ವಕೀಲರಾಗಿದ್ದರು (lawyer) ಮತ್ತು ಮೈಸೂರಲ್ಲೇ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ಅವರಿಗೆ ಸಂತೋಷ ನೀಡಿದ ಮತ್ತೊಂದು ಸಂಗತಿಯೆಂದರೆ, 14 ವರ್ಷಗಳ ಬಳಿಕ ವಕೀಲರ ಸಮಾವೇಶ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವುದು. ಈ ಸಮಾವೇಶ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವಂತಾಗಬೇಕೆಂದು ಮುಖ್ಯಮಂತ್ರಿ ಹೇಳಿದರು. ಮೈಸೂರು ವಕೀಲರ ಸಂಘ ಸಲ್ಲಿಸಿರುವ ಬೇಡಿಕೆಗಳ ಬಗ್ಗೆ ಮಾತಾಡಿದ ಅವರು ಎಲ್ಲ ಬೇಡಿಕೆಗಳನ್ನು ಒಟ್ಟಿಗೆ ಈಡೇರಿಸುವುದು ಸಾಧ್ಯವಾಗದಿದ್ದರೂ ಹಂತಹಂತವಾಗಿ ಎಲ್ಲವನ್ನು ಅಡ್ರೆಸ್ ಮಾಡಲಾಗುವುದು ಎಂದು ಹೇಳಿದರು. ಪ್ರಮುಖ ಬೇಡಿಕೆಯಾಗಿರುವ ವಕೀಲರ ರಕ್ಷಣಾ ಕಾಯ್ದೆಯನ್ನು ಮೊದಲ ಅಧಿವೇಶನದಲ್ಲೇ ಜಾರಿಗೊಳಿಸುವ ಇರಾದೆ ತಮ್ಮಲ್ಲಿತ್ತು ಅದರೆ ಕಾರಣಾಂತರಗಳಿಂದ ಅದನ್ನು ಮಾಡಲಾಗಲಿಲ್ಲ, ಮುಂದಿನ ಅಧಿವೇಶನಲ್ಲಿ ಖಂಡಿತ ಜಾರಿಗೊಳಿಸಲಾಗುವುದು ಎಂದು ವಕೀಲರಿಗೆ ಸಿದ್ದರಾಮಯ್ಯ ಭರವಸೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ