ಬಿಜೆಪಿ ಸಂಸದ ತೇಜಸ್ವಿ ಸೂರ್ಯಗೆ ಅಮಾವಾಸ್ಯೆ ಎಂದು ಏಕವಚನದಲ್ಲಿ ಜರಿದ ಸಿದ್ದರಾಮಯ್ಯ

Updated on: Oct 22, 2025 | 1:57 PM

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಅಮಾವಾಸ್ಯೆ ಎಂದು ಕರೆದಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್​ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರಿಂದ ರಾಜ್ಯ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

ಬೆಂಗಳೂರು, (ಅಕ್ಟೋಬರ್ 22): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಅಮಾವಾಸ್ಯೆ ಎಂದು ಕರೆದಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್​ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರಿಂದ ರಾಜ್ಯ ಅನ್ಯಾಯದ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು. ಪಿಸಿ ಮೋಹನ್, ಶೋಭಾ ಕರಂದ್ಲಾಜೆ, ಕೇಂದ್ರ ಸಚಿವ ಎಚ್ ಡಿಕುಮಾರಸ್ವಾಮಿ ಹೆಸರು ಪ್ರಸ್ತಾಪಿಸಿ ಕಿಡಿಕಾರಿದರು. ಹಾಗೇ ಅದ್ಯಾರೀ ಅದು ಬೆಂಗಳೂರು ಸೌತ್ ಎಂಪಿ ಇದ್ದಾರಲ್ಲ ತೇಜಸ್ವಿ ಸೂರ್ಯ ಅಲ್ಲ ಆನು ಅಮವಾಸ್ಯೆ ಎಂದು ಕರೆಯುತ್ತೇನೆಂದು ಏಕವಚನದಲ್ಲಿ ಏಕವಚನದಲ್ಲಿ ಹರಿಹಾಯ್ದರು.