ಸಿಎಂ ಮತ್ತು ಡಿಸಿಎಂರಿಂದ ಇವತ್ತು ಕಾವೇರಿಗೆ ಬಾಗಿನ ಸಮರ್ಪಣೆ, ಮಹತ್ವ ವಿವರಿಸಿದ ವೈದಿಕ ಭಾನು ಪ್ರಕಾಶ್ ಶರ್ಮ
ಭಾಗಮಂಡಲದಿಂದ ಪಶ್ಚಿಮ ಬಂಗಾಳದ ಪೂಂಪುಹಾರ್ ವರೆಗೆ 835 ಕೀಮೀ ಹರಿಯುವ ಕಾವೇರಿ ನದಿ ಮತ್ತು ಎಲ್ಲ ಹಳ್ಳಕೊಳ್ಳಗಳು ತುಂಬೋದು ಆಷಾಢ ಮಾಸದಲ್ಲೇ ಎಂದು ವೈದಿಕ ಭಾನುಪ್ರಕಾಶ್ ಹೇಳುತ್ತಾರೆ. ಆಷಾಢಮಾಸದ ಮಹತ್ವ ಮತ್ತು ಆಚರಣೆಗಳು ದೇವದೇವತೆಯರಿಗಲ್ಲ, ಮನುಕುಲಕ್ಕೆ ಮಾತ್ರ ಅವು ಮೀಸಲು ಎಂದು ಅವರು ಹೇಳುತ್ತಾರೆ.
ಮಂಡ್ಯ, ಜೂನ್ 30: ವೈದಿಕ ಭಾನುಪ್ರಕಾಶ್ ಶರ್ಮ (Bhanu Prakash Sharma) ಹೇಳುವಂತೆ ಕನ್ನಂಬಾಡಿ ಆಣೆಕಟ್ಟು ನಿರ್ಮಾಣಗೊಂಡ ನಂತರದ 90 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಬ್ರಹ್ಮಗಿರಿಯ ಭಾಗಮಂಡಲದಲ್ಲಿ ಉದ್ಭವಾಗುವ ಕಾವೇರಿ ನದಿ ತುಂಬಿ ಹರಿಯುತ್ತಿದ್ದಾಳೆ ಮತ್ತು ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಈ ಭಾಗದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪ ಮತ್ತು ಶ್ರೀರಂಗಪಟ್ಟಣದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಇಂದು ಕಾವೇರಿಗೆ ಬಾಗಿನ ಅರ್ಪಿಸಲಿದ್ದು, ಅದಕ್ಕಾಗಿ 40 ಜೊತೆ ಬಾಗಿನ ರೆಡಿಯಾಗಿವೆ ಎಂದು ವೈದಿಕ ಹೇಳುತ್ತಾರೆ. ಈ ಸಂದರ್ಭಕ್ಕಾಗಿ ವಿಶೇಷ ಪೂಜೆ ಹೋಮ, ಹವನಗಳನ್ನು ನಡೆಸಲಾಗುತ್ತದೆ ಎಂದು ವೈದಿಕ ಹೇಳುತ್ತಾರೆ.
ಇದನ್ನೂ ಓದಿ: ಈವರೆಗೆ ಯಾರೂ ಮಾಡದ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ