ದಶಕಗಳಿಂದ ತಮ್ಮ ಜೊತೆಯಿರುವ ಆರ್ ವಿ ದೇಶಪಾಂಡೆಯವರ ಹೆಸರನ್ನೇ ಸಿಎಂ ಸಿದ್ದರಾಮಯ್ಯ ವೇದಿಕೆ ಮೇಲೆ ಮರೆತರು!

|

Updated on: Mar 06, 2024 | 10:54 AM

ವಾರ್ಷಿಕ ಕದಂಬೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾಡಿದ ಸಿದ್ದರಾಮಯ್ಯ, ಭಾಷಣ ಆರಂಭಿಸುವಾಗ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರ ಹೆಸರುಗಳನ್ನು ಹೇಳುತ್ತಾರೆ. ಎಲ್ಲರ ಹೆಸರು ಅವರಿಗೆ ನೆನಪಿರುತ್ತದೆ ಆದರೆ ತಮ್ಮೊಂದಿಗೆ ದಶಕಗಳಿಂದ ಜೊತೆಗಿರುವ ಮಾಜಿ ಸಚಿವ ಹಾಗೂ ಹಳಿಯಾಳದ ಹಾಲಿ ಶಾಸಕ ಆರ್ ವಿ ದೇಶಪಾಂಡೆಯವರ ಹೆಸರು ಏನೇ ಪ್ರಯತ್ನಪಟ್ಟರೂ ನೆನಪಿಗೆ ಬರಲ್ಲ

ಕಾರವಾರ: ಅರವತ್ತಕ್ಕೆ ಅರಳು ಮರಳು ಅಂತ ಗಾದೆ ಮಾತೇ ನಮ್ಮಲ್ಲಿದೆ, ರಾಜ್ಯದ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರಿಗಾದರೋ (CM Siddaramaiah) ಈಗ 75ರ ಇಳಿಪ್ರಾಯ. ಅವರ ಜ್ಞಾಪಕ ಶಕ್ತಿಯ (memory power) ಬಗ್ಗೆ ಪ್ರಶ್ನೆ ಮಾಡುವ ಪ್ರಮೇಯ ಯಾವತ್ತೂ ಸೃಷ್ಟಿಯಾಗಿರಲಿಲ್ಲ. ಇವತ್ತು ಕಾರವಾರ ಶಿರಸಿಯಲ್ಲಿ ಅಂಥದೊಂದು ಸಂಗತಿ ನಡೆಯಿತು. ಇಲ್ಲಿ ನಡೆಯುವ ವಾರ್ಷಿಕ ಕದಂಬೋತ್ಸವ ಕಾರ್ಯಕ್ರಮದಲ್ಲಿ (Kadambothsava programme) ಭಾಗವಹಿಸಿ ಮಾತಾಡಿದ ಸಿದ್ದರಾಮಯ್ಯ, ಭಾಷಣ ಆರಂಭಿಸುವಾಗ ವೇದಿಕೆ ಮೇಲೆ ಆಸೀನರಾಗಿದ್ದ ಗಣ್ಯರ ಹೆಸರುಗಳನ್ನು ಹೇಳುತ್ತಾರೆ. ಎಲ್ಲರ ಹೆಸರು ಅವರಿಗೆ ನೆನಪಿರುತ್ತದೆ ಆದರೆ ತಮ್ಮೊಂದಿಗೆ ದಶಕಗಳಿಂದ ಜೊತೆಗಿರುವ ಮಾಜಿ ಸಚಿವ ಹಾಗೂ ಹಳಿಯಾಳದ ಹಾಲಿ ಶಾಸಕ ಆರ್ ವಿ ದೇಶಪಾಂಡೆಯವರ ಹೆಸರು ಏನೇ ಪ್ರಯತ್ನಪಟ್ಟರೂ ನೆನಪಿಗೆ ಬರಲ್ಲ! ಮಾಜಿ ಶಾಸಕರಾದ, ಮಾಜಿ ಶಾಸಕರಾದ ಅನ್ನುತ್ತಾ ದೇಶಪಾಂಡೆಯವರ ಮುಖ ನೋಡಿದರೂ ಅವರಿಗೆ ಹೆಸರು ನೆನಪಾಗಲ್ಲ.

ಒಂಥರಾ ಫಜೀತಿಗಿಟ್ಟುಕೊಳ್ಳುವ ಪ್ರಸಂಗ! ಕತ್ತನ್ನು ಎಡಕ್ಕೆ ತಿರುಗಿಸಿ ಶಾಸಕನ ಮುಖ ನೋಡುತ್ತಾ, ಶಾಸಕರಾದ.. ಅನ್ನುತ್ತಾರೆ. ನಂತರ ಬಲಕ್ಕೆ ತಿರುಗಿ ಅವರ ಹೆಸರೇ ನೆನಪಾಗುತ್ತಿಲ್ಲವಲ್ಲಪ್ಪ ಅಂತ ಸ್ವಗತದಲ್ಲಿ ಹೇಳಿಕೊಂಡ ಹಾಗೆ ಅನ್ನುತ್ತಾರೆ. ಅವರ ಗೊಂದಲ ಅರ್ಥಮಾಡಿಕೊಂಡ ಆಧಿಕಾರಿಯೊಬ್ಬರು ಅವರ ಕಿವಿಯಲ್ಲಿ ಆರ್ ವಿ ದೇಶಪಾಂಡೆ ಅಂತ ಹೇಳಿದ ಬಳಿಕ ದೇಶಪಾಂಡೆಯವರೇ… ಅನ್ನುತ್ತಾರೆ. ಕೆಮೆರಾ ದೇಶಪಾಂಡೆಯವರ ಕಡೆ ಪ್ಯಾನ್ ಮಾಡಿದ್ದರೆ ಅವರು ಪ್ರತಿಕ್ರಿಯೆ ನೋಡಬಹುದಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  RV Deshpande Profile: ಹಳಿಯಾಳದಲ್ಲಿ ಭರ್ಜರಿ ಜಯ ಸಾಧಿಸಿರುವ ಆರ್​ವಿ ದೇಶಪಾಂಡೆ ವ್ಯಕ್ತಿಚಿತ್ರ

Follow us on