ಭಾರತೀಯರು ಶಾಂತಿಪ್ರಿಯರು ಅನ್ನೋದನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ: ಹೆಚ್​ಕೆ ಪಾಟೀಲ್, ಸಚಿವ

Updated on: Apr 28, 2025 | 11:13 AM

ಸದ್ಯದ ಸ್ಥಿತಿಯಲ್ಲಿ ಏನೇ ಹೇಳಿಕೆ ನೀಡಿದರೂ ಅದು ಚರ್ಚೆಗೆ ಈಡಾಗುತ್ತದೆ, ಇದು ಸೂಕ್ಷ್ಮ ವಿಷಯವಾಗಿರುವುದರಿಂದ ರಾಜಕೀಯ ಬೇಡ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ವಿಷಯದ ಸಂಪೂರ್ಣ ಮಾಹಿತಿಯಿದೆ, ಅವರು ತೆಗೆದುಕೊಳ್ಳುವ ನಿರ್ಣಯವೇ ಅಂತಿಮ, ಎಲ್ಲರೊಂದಿಗೆ ಚರ್ಚೆ ಮಾಡಿ ಪ್ರಧಾನಿಯವರೇ ಒಂದು ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ ಎಂದು ಪಾಟೀಲ್ ಹೇಳಿದರು.

ಬೆಳಗಾವಿ, ಏಪ್ರಿಲ್ 28: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಾಕಿಸ್ತಾನದ ಜೊತೆ ಯುದ್ಧ ಬೇಕಿಲ್ಲ ಎಂದು ಹೇಳಿರುವುದು ವ್ಯಾಪಕ ಚರ್ಚೆಗೆ ಗುರಿಯಾಗಿದೆ. ಅವರು ಹೇಳಿಕೆಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್ (Law Minister HK Patil), ಭಾರತೀಯರು ಶಾಂತಿಪ್ರಿಯರು ಅನ್ನೋದು ಅವರ ಮಾತಿನ ಅರ್ಥವಾಗಿದೆ, ಹಿಂದೆ ಭಾರತದ ಜೊತೆ ಯಾರೇ ದುರ್ವರ್ತನೆ ಮಾಡಿದಾಗ, ಭಾರತೀಯರ ರಕ್ಷಣೆಗೋಸ್ಕರ ಯುದ್ಧ ಅನಿವಾರ್ಯ ಎಂದೆನಿಸಿದಾಗ ಭಾರತೀಯ ಸೇನೆ ವೈರಿಗಳನ್ನು ಸದೆಬಡಿದಿದ್ದು ಇತಿಹಾಸದಲ್ಲಿದೆ ಎಂದು ಹೇಳಿದರು.

ಇದನ್ನೂ ಓದಿ:   ಪಹಲ್ಗಾಮ್​ ದಾಳಿ: ಪಾಕ್​ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ, ಅಷ್ಟಕ್ಕೂ ಸುದ್ದಿಯಲ್ಲೇನಿದೆ?

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ