ಹೆಲಿಕಾಪ್ಟರ್​ನಲ್ಲಿ ಓಡಾಡಲು ಮಜಾವಾದಿ ಸಿದ್ದರಾಮಯ್ಯ ₹ 19 ಕೋಟಿ ಖರ್ಚು ಮಾಡಿದ್ದಾರೆ: ಅರ್ ಅಶೋಕ

ಅರುಣ್​ ಕುಮಾರ್​ ಬೆಳ್ಳಿ

Updated on: Mar 20, 2025 | 2:03 PM

ಸಾರ್ವಜನಿಕರಿಗೆ ಸೇರಬೇಕಿರುವ ಹಣವನ್ನು ಹೇಗೆ ಸ್ವಂತಕ್ಕಾಗಿ ಬಳಸಬೇಕೆಂದು ತಿಳಿಯಲು ಜನ ಕಾಂಗ್ರೆಸ್ ನಾಯಕರ ಬಳಿ ಹೋಗಬೇಕು, ಈ ವಿಷಯದಲ್ಲಿ ಅವರು ಒಂದು ಯೂನಿವರ್ಸಿಟಿಯನ್ನೇ ನಡೆಸುತ್ತಿದ್ದಾರೆ, ಪಕ್ಷದ ಕಾರ್ಯಕರ್ತರು ಮಜಾ ಮಾಡಲೆಂದು ಸಿದ್ದರಾಮಯ್ಯ ₹60 ಕೋಟಿ ಬಿಡುಗಡೆ ಮಾಡಿದ್ದಾರೆ ಎಂದು ಅಶೋಕ ಹೇಳಿದರು.

ಬೆಂಗಳೂರು, ಮಾರ್ಚ್ 20: ಜನ ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುವ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ದುಂದುವೆಚ್ಚದಲ್ಲಿ ಉಡಾಯಿಸಿ ಮಜಾ ಮಾಡುವ ಮಜಾವಾದಿ ಎಂದು ವಿರೋಧಪಕ್ಷದ ನಾಯಕ ಅರ್ ಅಶೋಕ ಹೇಳಿದರು. ಅವರ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರು ಧರಿಸುವ ಬಟ್ಟೆ ಮತ್ತು ಶೂಗಳ ಮೇಲೆ ಟೀಕೆ ಮಾಡುತ್ತಾರೆ, ಆದರೆ ಸಿದ್ದರಾಮಯ್ಯ ಹೆಲಿಕಾಪ್ಟರ್​ನಲ್ಲಿ ಹಾರಾಡುತ್ತಾ ಹಣವನ್ನು ವ್ಯಯ ಮಾಡುತ್ತಿದ್ದಾರೆ, 19 ಕೋಟಿ ರೂ. ಹಣವನ್ನು ಅವರು ಕೇವಲ ಚಾಪರ್​ಗಾಗಿ ಖರ್ಚು ಮಾಡಿದ್ದಾರೆ ಎಂದು ಅಶೋಕ ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Karnataka Budget Session: ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಅನೇಕ ವರದಿಗಳಿದ್ದರೂ ಸರ್ಕಾರ ನಂಬುತ್ತಿಲ್ಲ: ಅರ್ ಅಶೋಕ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.