Karnataka Budget Session: ಕರ್ನಾಟಕ ಲೋಕಸೇವಾ ಆಯೋಗದ ವಿರುದ್ಧ ಅನೇಕ ವರದಿಗಳಿದ್ದರೂ ಸರ್ಕಾರ ನಂಬುತ್ತಿಲ್ಲ: ಅರ್ ಅಶೋಕ
ಅಶೋಕ ಕರ್ನಾಟಕ ಲೋಕಸೇವಾ ಆಯೋಗ ವರದಿ ಬಗ್ಗೆ ಹೇಳಿದಾಗ ಕೆರಳುವ ಶಿವಲಿಂಗೇಗೌಡರು, ಆಯೋಗವೇ ತಪ್ಪು ಮಾಡಿ ಅದೇ ತನಿಖೆ ನಡೆಸಿದರೆ ಅದಕ್ಕೇನು ಬೆಲೆ ಇದ್ದೀತು, ಆಯೋಗವು ಅಯೋಗ್ಯವಾಗಿದೆ, ಅದರ ಕಾರ್ಯಕ್ಷಮತೆ ನಂಬಲರ್ಹವಲ್ಲ ಎಂದು ಚಿಕ್ಕಮಕ್ಕಳು ಸಹ ಹೇಳುತ್ತಿದ್ದಾರೆ, ಅದು ನೀಡಿರುವ ವರದಿಯನ್ನು ಬದಿಗಿಟ್ಟು ಆಯೋಗವನ್ನೇ ರದ್ದು ಮಾಡುವಂತೆ ಹೇಳಿ ಎಂದು ಅಶೋಕ ಅವರಿಗೆ ಹೇಳುತ್ತಾರೆ.
ಬೆಂಗಳೂರು, ಮಾರ್ಚ್ 4: ಸದನದಲ್ಲಿ ಇಂದು ವಿಪಕ್ಷ ನಾಯಕ ಆರ್ ಆಶೋಕ (R Ashoka) ಮತ್ತು ಕಾಂಗ್ರೆಸ್ ಶಾಸಕಕ ಕೆಎಂ ಶಿವಲಿಂಗೇಗೌಡ ನಡುವೆ ಕರ್ನಾಟಕ ಲೋಕಸೇವಾ ಆಯೋಗದ ಕ್ಷಮತೆಗೆ ಸಂಬಂಧಿಸಿದಂತೆ ಬಿಸಿಬಿಸಿ ವಾಗ್ವಾದ ನಡೆಯಿತು. ಆಯೋಗದ ಪ್ರಮಾದಗಳಿಗೆ ಸಂಬಂಧಿಸಿದಂತೆ ಅಶೋಕ ಅವರು ಸರ್ಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದರು. ತಾನು ನೀಡುವ ಯಾವ ಸಾಕ್ಷ್ಯವನ್ನೂ ಸರ್ಕಾರ ನಂಬಲು ತಯಾರಿಲ್ಲ, ಎಫ್ಐಆರ್ ಆಗಿರುವ ವಿಷಯ ಹೇಳಿದರೆ ಯಾರೂ ಬೇಕಾದರೂ ಅದನ್ನು ಮಾಡಿಸಬಹುದು ಅಂತ ಸರ್ಕಾರ ಹೇಳುತ್ತದೆ, ಫೋರೆನ್ಸಿಕ್ ಲ್ಯಾಬ್ ನೀಡಿದ 800 ಪುಟಗಳ ವರದಿಯನ್ನೂ ನಂಬಲ್ಲ, ಈಗ ಖುದ್ದು ಕರ್ನಾಟಕ ಲೋಕಸೇವಾ ಅಯೋಗ ನಡೆಸಿದ ತನಿಖೆಯ ವರದಿಯನ್ನೂ ನಂಬಲ್ಲ ಎಂದು ವಿರೋಧ ಪಕ್ಷದ ನಾಯಕ ಹೇಳುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session; ಗ್ರಾಮೀಣ ಭಾಗದ ಕಿರಾಣಾ ಅಂಗಡಿಗಳಲ್ಲೂ ಅವ್ಯಾಹತವಾಗಿ ಮದ್ಯ ಮಾರಾಟ ನಡೆದಿದೆ: ಅರಗ ಜ್ಞಾನೇಂದ್ರ