ಶ್ರೀರಂಗಪಟ್ಟಣ ಬಳಿ ಅಭಿಮಾನಿಯೊಬ್ಬನ ಪೆಟ್ರೋಲ್ ಬಂಕ್ ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಪಂಪನ್ನು ರಿಬ್ಬನ್ ಕಟ್ ಮಾಡಿ ಉದ್ಧಾಟಿಸಿದ ಬಳಿಕ ಮತ್ತೊಂದನ್ನು ಸುತ್ತೂರು ಶ್ರೀಗಳು ಉದ್ಘಾಟಿಸುತ್ತಾರೆ. ಸಿದ್ದರಾಮಯ್ಯ ಕೈಯಿಂದ ಕತ್ತರಿ ಇಸಿದುಕೊಂಡು ರಿಬ್ಬನ್ ಕಟ್ ಮಾಡುವ ಮೊದಲು ಶ್ರೀಗಳು ಶಾಸಕ ರಮೇಶ್ ಬಾಬುಗೆ ಉದ್ಘಾಟನೆ ಪ್ರಕ್ರಿಯೆ ಪೂರೈಸುವಂತೆ ಕೇಳುತ್ತಾರೆ, ಅವರು ನಿರಾಕರಿಸಿದಾಗ ತಾವು ಕಟ್ ಮಾಡುತ್ತಾರೆ. ಕಾವಿ ಮತ್ತು ಖಾದಿಯ ನಡುವಿನ ಸೂಕ್ಷ್ಮತೆಯೇ ಅದು!
ಮಂಡ್ಯ, ಜುಲೈ 18: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಜಿಲ್ಲೆಯ ಶ್ರೀರಂಗಪಟ್ಟಣದ ಬೆಳಗೊಳದಲ್ಲಿ ತಮ್ಮ ಅಭಿಮಾನಿ ಮತ್ತು ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡನೊಬ್ಬನ ಪೆಟ್ರೋಲ್ ಬಂಕನ್ನು (petrol bunk) ಉದ್ಧಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯೊಂದಿಗೆ ಸುತ್ತೂರು ಮಠದ ಶ್ರೀಳಾಗಿರುವ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮತ್ತು ಸ್ಥಳೀಯ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಇದ್ದರು. ದಕ್ಷಿಣ ಕರ್ನಾಟಕದ ಅನೇಕ ಭಾಗಗಳಲ್ಲಿ ಮಾಡುವಂತೆ ಸಿಎಂ ಅಭಿಮಾನಿ ಶಿವರಾಮ್ ತನ್ನ ನೆಚ್ಚಿನ ನಾಯಕನನ್ನು ಸೇಬು ಹಣ್ಣುಗಳ ಹಾರದ ಮೂಲಕ ಸ್ವಾಗತಿಸಿದರು.
ಇದನ್ನೂ ಓದಿ: ಫೇಸ್ಬುಕ್ನಲ್ಲಿ ಕನ್ನಡ ಅನುವಾದ ಲೋಪ: ಸಿಎಂ ಸಿದ್ದರಾಮಯ್ಯಗೆ ಕ್ಷಮೆಯಾಚಿಸಿದ ಮೆಟಾ ಸಂಸ್ಥೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
