ಗ್ಯಾರಂಟಿಗಳ ಪ್ರಶ್ನೆಗೆ ಉತ್ತರಿಸಿ ಹೊರಡಲನುವಾದ ಸಿದ್ದರಾಮಯ್ಯರಿಗೆ ಪುನಃ ಪ್ರಶ್ನೆ ಕೇಳಿದಾಗ ತಾಳ್ಮೆ ತಪ್ಪಿತು!

ಗ್ಯಾರಂಟಿಗಳ ಪ್ರಶ್ನೆಗೆ ಉತ್ತರಿಸಿ ಹೊರಡಲನುವಾದ ಸಿದ್ದರಾಮಯ್ಯರಿಗೆ ಪುನಃ ಪ್ರಶ್ನೆ ಕೇಳಿದಾಗ ತಾಳ್ಮೆ ತಪ್ಪಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 31, 2024 | 4:12 PM

ಗ್ಯಾರಂಟಿಗಳ ಬಗ್ಗೆ ಮಾಗಡಿ ಶಾಸಕ ಹೆಚ್ ಎನ್ ಬಾಲಕೃಷ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದಾಗ ಅವರು, ಶಾಸಕರು ಯಾವುದೋ ದೃಷ್ಟಿಯಲ್ಲಿ ಹೇಳಿರಬಹುದು, ಆದರೆ ನಮ್ಮ ಸರ್ಕಾರ ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ, ಅವು ಮುಂದುವರಿಯುತ್ತವೆ, ಅವು ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳು, ಹಾಗಾಗಿ ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸಾರ್ವಜನಿಕವಾಗಿ ಆಗಾಗ ಕೋಪ ಪ್ರದರ್ಶಿಸುವುದು ಹೊಸದೇನಲ್ಲ. ಕೆಲವು ಸಲ ಕೋಪಗೊಂಡು ಮುಗುಳ್ನಗುತ್ತಾರೆ, ಕೋಪ ಮಾಡಿಕೊಂಡಿದ್ದನ್ನು ಬ್ಯಾಲೆನ್ಸ್ ಮಾಡುವುದಕ್ಕೋಸ್ಕರ! ಇವತ್ತು ವಿಧಾನ ಸೌಧದ (Vidhana Soudha) ಬಳಿ ಅವರು ಸಿಟ್ಟು ಮಾಡಿಕೊಂಡ ಪ್ರಸಂಗ ನಡೆಯಿತು. ಅವರು ಇದ್ದಲ್ಲಿ ಪತ್ರಕರ್ತರು (media persons) ಘೇರಾಯಿಸುವುದು ಸಾಮಾನ್ಯ. ಹಾಗಾಗಿ, ಸಿದ್ದರಾಮಯ್ಯ ವಿಧಾನ ಸೌಧದಿಂದ ಹೊರಬಂದಾಗ ಮಾಧ್ಯಮದವರು ಅವರನ್ನು ಮುಕ್ಕುರಿದರು. ಗ್ಯಾರಂಟಿಗಳ ಬಗ್ಗೆ ಮಾಗಡಿ ಶಾಸಕ ಹೆಚ್ ಎನ್ ಬಾಲಕೃಷ್ಣ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದಾಗ ಅವರು, ಶಾಸಕರು ಯಾವುದೋ ದೃಷ್ಟಿಯಲ್ಲಿ ಹೇಳಿರಬಹುದು, ಆದರೆ ನಮ್ಮ ಸರ್ಕಾರ ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ, ಅವು ಮುಂದುವರಿಯುತ್ತವೆ, ಅವು ಕಾಂಗ್ರೆಸ್ ಸರ್ಕಾರ ಬಡವರಿಗಾಗಿ ರೂಪಿಸಿರುವ ಕಾರ್ಯಕ್ರಮಗಳು, ಹಾಗಾಗಿ ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದರು. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ, ಪತ್ರಕರ್ತರು ಒಟ್ಟಾಗಿ ಪ್ರಶ್ನೆಗನ್ನು ಕೇಳಿದಾಗ ಅವರು ತಾಳ್ಮೆ ಕಳೆದುಕೊಂಡರು. ಪತ್ರಕರ್ತರು ತಮ್ಮನ್ನು ಅಡ್ಡಗಟ್ಟಿದ್ದಕ್ಕೆ ಮತ್ತಷ್ಟು ಸಿಡುಕಿದ ಸಿದ್ದರಾಮಯ್ಯ, ದಾರಿ ಬಿಡ್ರೀ ಅಂತ ರೇಗುತ್ತಾರೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ