Karnataka Budget Session: ಬಜೆಟ್ ಮೇಲಿನ ಚರ್ಚೆಗಳಿಗೆ ಉತ್ತರಿಸುವಾಗ ತಾಳ್ಮೆ ಕಳೆದುಕೊಂಡ ಸಿದ್ದರಾಮಯ್ಯ

|

Updated on: Mar 21, 2025 | 12:13 PM

ತಮ್ಮ ಉತ್ತರವನ್ನು ಸಿದ್ದರಾಮಯ್ಯ ಕುಳಿತು ಓದುತ್ತಿದ್ದರೆ, ಹನಿ ಟ್ರ್ಯಾಪ್ ಕೆಲಸಗಳಿಗಾಗಿ ಎಷ್ಟು ಹಣ ಮೀಸಲಿಟ್ಟಿದ್ದೀರಿ ಹೇಳಿ ಎಂದು ವಿರೋಧ ಪಕ್ಷದ ಶಾಸಕರು ಪ್ರಶ್ನಿಸುತ್ತಾರೆ. ತಮ್ಮ ಉತ್ತರವನ್ನು ಮುಂದುವರಿಸುವ ಸಿಎಂ, ಬಜೆಟ್ ಮೇಲಿನ ಚರ್ಚೆಯಲ್ಲಿ 80 ಸದಸ್ಯರು ಭಾಗಿಯಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ, ಸದನದ ಹೊರಗೂ ಬಜೆಟ್​ಗೆ ವಿವಿಧ ಕ್ಷೇತ್ರಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳುತ್ತಾರೆ.

ಬೆಂಗಳೂರು, 21 ಮಾರ್ಚ್: ರಾಜ್ಯಪಾಲರ ಭಾಷಣ ಮತ್ತು ಮಾರ್ಚ್ 7ರಂದು ತಾವು ಮಂಡಿಸಿದ ಬಜೆಟ್ ಮೇಲೆ ನಡೆದ ಚರ್ಚೆಯ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದಾಗ ವಿರೋಧ ಪಕ್ಷದ ನಾಯಕರು ಹನಿ ಟ್ರ್ಯಾಪ್ ಪ್ರಕರಣಕ್ಕೆ (honey trap case) ಸಂಬಂಧಿಸಿದಂತೆ ಸರ್ಕಾರದಿಂದ ಸ್ಪಷ್ಟನೆ ಬಯಸಿ ಗಲಾಟೆ ಮಾಡಿದರು. ಒಂದು ಹಂತದಲ್ಲಿ ತಮ್ಮ ತಾಳ್ಮೆಯನ್ನು ಕಳೆದುಕೊಳ್ಳುವ ಸಿದ್ದರಾಮಯ್ಯ ಬಿಜೆಪಿ ಶಾಸಕರನ್ನು ಉದ್ದೇಶಿಸಿ ಏಯ್ ಹೋಗ್ರೀ, ನಿಮ್ಮ ಯಾವ ಪ್ರಶ್ನೆಗೂ ಉತ್ತರ ಕೊಡಲ್ಲ ಅನ್ನುತ್ತಾರೆ. ನೀವು ಹೀಗೆ ಹೇಳಿದರೆ ಹೇಗೆ ಅನ್ನುತ್ತಾ ಬಿಜೆಪಿ ನಾಯಕರು ಕೂಗಾಡುವುದನ್ನು ಮುಂದುವರಿಸುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಹೆಲಿಕಾಪ್ಟರ್​ನಲ್ಲಿ ಓಡಾಡಲು ಮಜಾವಾದಿ ಸಿದ್ದರಾಮಯ್ಯ ₹ 19 ಕೋಟಿ ಖರ್ಚು ಮಾಡಿದ್ದಾರೆ: ಅರ್ ಅಶೋಕ