Karnataka Budget Session; ನಂಬಿಕೆ, ವಿಶ್ವಾಸಗಳಿಗೆ ವಿಷಪ್ರಾಶನ ಮಾಡಿರುವಂಥ ಘಟನೆ ಹನಿ ಟ್ರ್ಯಾಪ್: ಸುನೀಲ ಕುಮಾರ
ಆಡಳಿತ ಪಕ್ಷದ ಸಚಿವರರೊಬ್ಬರ ಕೈವಾಡ ಹನಿಟ್ರ್ಯಾಪ್ ಪ್ರಕರಣದಲ್ಲಿ ಇದ್ದಿದ್ದೇಯಾದರೆ ಮುಖ್ಯಮಂತ್ರಿಯವರು ಸಚಿವನನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಬೇಕೆಂದು ಸುನೀಲ ಕುಮಾರ್ ಹೇಳಿದಾಗ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಏನನ್ನೋ ಹೇಳಲು ಪ್ರಯತ್ನಿಸುತ್ತಾರೆ. ಆರೋಪಗಳನ್ನು ತಾನು ಮಾಡಿದ್ದಲ್ಲ, ಇಂಟಿಲೆನ್ಸ್ ವಿಭಾಗ ಮುಖ್ಯಮಂತ್ರಿಯವರ ಸುಪರ್ದಿಯಲ್ಲಿರುತ್ತದೆ, ಅವರು ಉತ್ತರ ಕೊಡಲಿ ಎಂದು ಸುನೀಲ ಹೇಳುತ್ತಾರೆ.
ಬೆಂಗಳೂರು, 19 ಮಾರ್ಚ್: ಸದನದ ಇವತ್ತಿನ ಕಾರ್ಯಕಲಾಪ (House proceedings) ಹನಿ ಟ್ರ್ಯಾಪ್ ಪ್ರಕರಣದೊಂದಿಗೆ ಶುರುವಾಯಿತು. ಮೊದಲು ಮಾತಾಡಿದ ಬಿಜೆಪಿ ಶಾಸಕ ಸುನೀಲ ಕುಮಾರ್, ಶಾಸನ ಸಭೆಯಲ್ಲಿ ಪ್ರಾಯಶಃ ಮೊದಲ ಬಾರಿಗೆ ಇಂಥದೊಂದು ವಿಷಯ ಚರ್ಚೆ ಬಂದಿರೋದು ದುರದೃಷ್ಟಕರ, ಇಲ್ಲಿರುವ ಸದಸ್ಯರೆಲ್ಲ ಕುಲೀನ ಮನೆತನಗಳಿಂದ ಬಂದವರು, ಹನಿ ಟ್ರ್ಯಾಪ್ ವಿಷಯ ಸದನದಲ್ಲಿ ನಿನ್ನೆ ಚರ್ಚೆ ಬಂದರೂ ಬೇರೆ ಬೇರೆ ವಾಹಿನಿಗಳಲ್ಲಿ ಇದರ ಬಗ್ಗೆ ಎರಡು ವಾರಗಳಿಂದ ಚರ್ಚೆಯಾಗುತ್ತಿದೆ, ರಾಜ್ಯದಲ್ಲಿ ಹನಿ ಟ್ರ್ಯಾಪ್ ಮತ್ತು ಸಿಡಿ ತಯಾರಿಸುವ ಫ್ಯಾಕ್ಟರಿಗಳಿ ಅಸ್ತಿತ್ವದಲ್ಲಿವೆ ಅಂತ ಹೇಳಲಾಗುತ್ತಿದ್ದರೂ ಇದವರೆಗೆ ಯಾವುದೇ ಕ್ರಮ ಜರುಗಿಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಕ್ಕೂ ಮೊದಲು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕೊಡಬೇಕು ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Budget Session: ಸಿದ್ದರಾಮಯ್ಯ ನಡೆಸುತ್ತಿರೋದು ಯೂ-ಟರ್ನ್ ಸರ್ಕಾರ ಅಂತ ಜರಿದ ಬಿಜೆಪಿ ಶಾಸಕ ಸುನೀಲ ಕುಮಾರ