ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಅರಿಯುವ ಪ್ರಾಮಾಣಿಕ ಪ್ರಯತ್ನ ಸಿದ್ದರಾಮಯ್ಯ ಮಾಡಿದರು

|

Updated on: Jul 05, 2024 | 8:04 PM

ಸಿದ್ದರಾಮಯ್ಯ ಮಕ್ಕಳೊಂದಿಗೆ ಮಾತಾಡುತ್ತಿರುವಾಗ ಒಬ್ಬ ಮಹಿಳಾ ಅಧಿಕಾರಿ ಅಲ್ಲಿಗೆ ಬರುತ್ತಾರೆ. ಶಾಲೆಗೆ ಯಾವತ್ತಾದರೂ ಸರ್ಪ್ರೈಸ್ ವಿಸಿಟ್ ಕೊಡ್ತೀಯೇನಮ್ಮ ಅಂತ ಸಿಎಂ ಕೇಳುತ್ತಾರೆ. ಅವರನ್ನು ಶಾಲೆಯಲ್ಲಿ ನೋಡಿ ಶಾಕ್​ಗೊಳಗಾಗಿದ್ದ ಅಧಿಕಾರಿ ಹೂಂ ಸರ್ ಹೌದು ಸರ್ ಎನ್ನುತ್ತಾರೆ. ಮುಖ್ಯಮಂತ್ರಿಯವರೊಂದಿಗೆ ಬೇರೆ ಅಧಿಕಾರಿಗಳೂ ಇದ್ದರು.

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಗೆ ಇಂದು ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಕ್ಕಳಿಗೆ ಪಾಠ ಹೇಳಿದರು, ಅವರೊಂದಿಗೆ ಊಟ ಮಾಡಿದರು ಮತ್ತು ಅವರ ಕುಂದು ಕೊರತೆಗಳನ್ನು ಆಲಿಸಿದರು. ಅವರ ಸರ್ಪ್ರೈಸ್ ಭೇಟಿ ಕಾಟಾಚಾರಕ್ಕಾಗಿರದೆ ಶಾಲೆಯಲ್ಲಿ ಮಕ್ಕಳ ಸ್ಥಿತಿಗತಿ ಹೇಗಿದೆ, ಊಟೋಪಚಾರ ಹೇಗಿದೆ, ಸ್ವಚ್ಛತೆ ಕಡೆ ಗಮನ ನೀಡಲಾಗುತ್ತದೆಯೇ ಮೊದಲಾದ ಸಂಗತಿಗಳನ್ನು ತಿಳಿಯುವ ಪ್ರಾಮಾಣಿಕ ಪ್ರಯತ್ನವಾಗಿತ್ತು ಅನ್ನೋದು ಅವರು ಮಕ್ಕಳೊಂದಿಗೆ ಕಳೆದ ಒಟ್ಟು ಸಮಯದಿಂದ ಗೊತ್ತಾಗುತ್ತದೆ. ಅವರು ಅಲ್ಲಿಂದ ಬೇಗ ಹೊರಬೀಳುವ ಪ್ರಯತ್ನ ಮಾಡದೆ ತಾಳ್ಮೆಯಿಂದ ಮಕ್ಕಳೊಂದಿಗೆ ಬೆರೆತರು. ಮಕ್ಕಳಿಗೆ ನೀಡುವ ಊಟದ ಬಗ್ಗೆ ಕೇಳಿದಾಗ ಒಬ್ಬ ಬಾಲಕ ತಿಂಡಿಗೆ ದೋಸೆ ಕೊಡುತ್ತಾರೆ, ಲಂಚ್ ಗೆ ಮುದ್ದೆ, ಅನ್ನ ಸಾಂಬಾರು ಮತ್ತು ಮಜ್ಜಿಗೆ ಕೊಡುತ್ತಾರೆ ಹಾಗೂ ರಾತ್ರಿ ಊಟಕ್ಕೆ ಚಪಾತಿ ಪಲ್ಯ ಕೊಡುತ್ತಾರೆ ಅಂತ ಹೇಳುತ್ತಾನೆ. ನಂತರ ಸಿದ್ದರಾಮಯ್ಯ, ಶೂ, ಸಾಕ್ಸ್, ಹಾಸಿಗೆ ದಿಂಬು, ಟೂಥ್ ಪೇಸ್ಟ್, ಬ್ರಶ್ ಬಗ್ಗೆ ಕೇಳಿ ಬಾತ್ ರೂಮು ಸ್ವಚ್ಛವಾಗಿರುತ್ತಾ ಅಂತ ಕೇಳುತ್ತಾರೆ. ಎಲ್ಲ ಪ್ರಶ್ನೆಗಳಿಗೆ ಬಾಲಕ ಹೌದೆನ್ನುವಂತೆ ತಲೆಯಾಡಿಸುತ್ತಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳೊಂದಿಗೆ ಕೂತು ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು!