ನನ್ನ ಸಲಹೆ ಕಡೆಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಡಾಂತರ ತಂದುಕೊಂಡಿದ್ದಾರೆ: ಪ್ರತಾಪ್ ಸಿಂಹ

ನನ್ನ ಸಲಹೆ ಕಡೆಗಣಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಡಾಂತರ ತಂದುಕೊಂಡಿದ್ದಾರೆ: ಪ್ರತಾಪ್ ಸಿಂಹ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 17, 2024 | 4:02 PM

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಹಿಂದಿನ ಬಿಜಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಸರ್ಕಾರ, ಪಿಎಸ್​ಐ ಹಗರಣ, ಪೇಸಿಎಮ್ ಅಂತೆಲ್ಲ ಹಲವಾರು ಆರೋಪಗಳನ್ನು ಮಾಡಿದರು. ಆದರೆ ಅಧಿಕಾರಕ್ಕೆ ಬಂದ ಮೇಲೇ ತಾನು ಮಾಡಿದ ಯಾವುದೇ ಅರೋಪದ ತನಿಖೆ ಮಾಡಿಸಲಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ನಗರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಡಾ ಹಗರಣ ಬೆಳಕಿಗೆ ಬಂದಾಗಲೇ ಮುಖ್ಯಮಂತ್ರಿಯವರ ಪತ್ನಿಯವರಿಗೆ ನೀಡಲಾಗಿರುವ ನಿವೇಶನಗಳನ್ನು ಸರೆಂಡರ್ ಮಾಡಿ ತನಿಖೆ ಆದೇಶ ಮಾಡಿದರೆ ಅಕ್ರಮವಾಗಿ ಸೈಟ್ ಪಡೆದವರೆಲ್ಲ ಸಿಕ್ಹಾಕಿಕೊಳ್ಳುತ್ತಾರೆ ಎಂಬ ಕಳಕಳಿಪೂರ್ವಕ ಮನವಿಯನ್ನು ಸಿದ್ದರಾಮಯ್ಯನವರಿಗೆ ಮಾಡಿದ್ದೆ, ಆದರೆ ಅವರು ತನ್ನ ಮನವಿಯನ್ನು ಕಡೆಗಣಿಸಿ ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಪ್ರತಾಪ್ ಹೇಳಿದರು. ಆದರೆ, ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಸ್ಯಾಂಕ್ಷನ್ ಅನ್ನು ತಾನು ಸ್ವಾಗತಿಸುವುದಾಗಿ ಹೇಳಿದ ಪ್ರತಾಪ್, ಇದು ರಾಜ್ಯದಲ್ಲಿ ಉತ್ತಮ ರಾಜಕಾರಣಕ್ಕೆ ಮೇಲ್ಪಂಕ್ತಿ ಹಾಕಲಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜ್ಯಪಾಲರ ನಡೆ ಸಂವಿಧಾನಬಾಹಿರ, ರಾಜೀನಾಮೆ ನೀಡಲ್ಲ: ಸಿಎಂ ಸಿದ್ದರಾಮಯ್ಯ ಖಡಕ್ ಮಾತು