ವಿಶೇಷಚೇತನರೊಟ್ಟಿಗೆ ಸಿನಿಮಾ ಯಶಸ್ಸು ಆಚರಿಸಿಕೊಂಡ ‘ಗೌರಿ’
ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ ಅವರ ಪುತ್ರ ಸಮರ್ಜಿತ್ ಲಂಕೇಶ್ ಮೊದಲ ಬಾರಿ ನಾಯಕನಾಗಿ ನಟಿಸಿರುವ ‘ಗೌರಿ’ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆ ಆಗಿ ಗಮನ ಸೆಳೆದಿದೆ. ಸಿನಿಮಾದ ಬಗ್ಗೆ ಧನಾತ್ಮಕ ಅಭಿಪ್ರಾಯ ವ್ಯಕ್ತವಾಗಿರುವ ಕಾರಣ ಸಿನಿಮಾದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯಾ ಅವರುಗಳು ಭಿನ್ನವಾಗಿ ಸಿನಿಮಾ ಯಶಸ್ಸನ್ನು ಸಂಭ್ರಮಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಅವರ ಮೊದಲ ಸಿನಿಮಾ ‘ಗೌರಿ’ ಆಗಸ್ಟ್ 15 ರಂದು ಬಿಡುಗಡೆ ಆಗಿತ್ತು. ಸಿನಿಮಾದ ನಾಯಕಿ ಸಾನ್ಯಾ ಐಯ್ಯರ್ಗೂ ಸಹ ಇದು ಮೊದಲ ಸಿನಿಮಾ. ಹೊಸ ಜೋಡಿಯ ಸಿನಿಮಾವನ್ನು ಜನರು ಮೆಚ್ಚಿಕೊಂಡಿದ್ದು, ಇಬ್ಬರಿಗೂ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ‘ಗೌರಿ’ ಸಿನಿಮಾಕ್ಕೆ ಜನರ ಪ್ರೀತಿ ಲಭ್ಯವಾದ ಬೆನ್ನಲ್ಲೆ ಸಿನಿಮಾದ ನಾಯಕ ಸಮರ್ಜಿತ್ ಹಾಗೂ ನಾಯಕಿ ಸಾನ್ಯಾ ಐಯ್ಯರ್ ವಿಶೇಷವಾಗಿ ಸಿನಿಮಾದ ಯಶಸ್ಸನ್ನು ಆಚರಿಸಿದ್ದಾರೆ. ಮೊದಲೇ ನಿಶ್ಚಯವಾಗಿದ್ದಂತೆ ವಿಶೇಷಚೇತನರ ಶಾಲೆಗೆ ತೆರಳಿ ಅವರಿಗೆ ಊಟ ಹಾಕಿಸಿ, ಅವರಿಗೆ ಊಟ ಬಡಿಸಿ ತಮ್ಮ ಸಿನಿಮಾದ ಯಶಸ್ಸನ್ನು ಸಂಭ್ರಮಿಸಿದ್ದಾರೆ. ಬಳಿಕ ಟಿವಿ9 ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 17, 2024 04:06 PM
Latest Videos