ಸಿದ್ದರಾಮಯ್ಯ ಮೇಲೆ ಈಗಲೂ ರಮೇಶ್ ಜಾರಕಿಹೊಳಿಗೆ ಈಗಲೂ ಅದೇ ಪ್ರೀತಿ ಮತ್ತು ಅಭಿಮಾನ!
ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಷಯದ ಬಗ್ಗೆ ‘ನಮ್ಮ’ ಕೋರ್ ಕಮಿಟಿ ಕಾಮೆಂಟ್ ಮಾಡಲು ನಿರ್ಧಾರಿಸಿದೆ ಎಂದು ರಮೇಶ್ ಜಾರಕಿಹೊಳಿ ಹೇಳುತ್ತಾರೆ. ಅವರು ‘ನಮ್ಮ’ ಕೋರ್ ಕಮಿಟಿ ಅನ್ನುವಾಗ ಮುಗುಳ್ನಗುತ್ತಾರೆ. ಅಂದರೆ ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳದ ಭಿನ್ನಮತೀಯ ಶಾಸಕರ ಕೋರ್ ಕಮಿಟಿಯೇ?
ಬೆಳಗಾವಿ: ದೋಸ್ತಿ ಸರ್ಕಾರದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದವರಿಗೆ ಈಗಲೂ ಸಿದ್ದರಾಮಯ್ಯನವರ ಮೇಲೆ ಅಗಾಧ ಪ್ರೀತಿ-ವಿಶ್ವಾಸಗಳಿವೆ. ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ವಿಷಯಕ್ಕೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ ಅವರ ಮಾತಿನಲ್ಲಿ ಸಿದ್ದರಾಮಯ್ಯ ಮೇಲಿರುವ ಅಭಿಮಾನವನ್ನು ಗಮನಿಸಬಹುದು. ಮೊದಲಿಗೆ ಅವರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ಸಂಬಂಧಿಸಿದಂತೆ ತಮ್ಮ ಪಕ್ಷದ ನಿಲುವಿಗೆ ತಾನು ಬದ್ಧ ಎಂದು ಹೇಳುತ್ತಾರೆ. ನಂತರ ಅವರು ವಿಷಯದ ಬಗ್ಗೆ ಮಾತಾಡುವುದು ಸರಿಯಲ್ಲ ಅನ್ನುತ್ತಾರಾದರೂ ನಿರ್ದಿಷ್ಟವಾಗಿ ಸಿದ್ದರಾಮಯ್ಯ ಬಗ್ಗೆ ಕೇಳಿದ ಪ್ರಶ್ನೆಗೆ, ಅವರೊಬ್ಬ ಮಾಸ್ ಲೀಡರ್, ಅನೇಕ ಹೋರಾಟಗಳನ್ನು ಮಾಡಿಕೊಂಡು ಬಂದು ಮುಖ್ಯಮಂತ್ರಿಯ ಸ್ಥಾನ ತಲುಪಿದ್ದಾರೆ, ಅದರೆ ಅವರು ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ವಿರೋಧ ಪಕ್ಷದ ನಾಯಕನಾಗಿ ಸಿದ್ದರಾಮಯ್ಯನವರು ಆಡಿದ ಮಾತುಗಳನ್ನು ನೆನಪಿಸಿಕೊಳ್ಳಬೇಕೆಂದು ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಿಎಂ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಬೆನ್ನಲ್ಲೇ ರಾಜ್ಯಪಾಲರನ್ನ ಭೇಟಿಯಾದ ಟಿ.ಜೆ ಅಬ್ರಹಾಂ ಹೇಳಿದ್ದಿಷ್ಟು