Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಲ್​ಕಾಲ್ ಮಾಡೋನು ರಾಜ್ಯಪಾಲರನ್ನು ಭೇಟಿಯಾಗಬಹುದಾದರೆ ಜನಸಾಮಾನ್ಯ ಯಾಕಿಲ್ಲ? ಸಿಎಂ ಬೆಂಬಲಿಗ

ರೋಲ್​ಕಾಲ್ ಮಾಡೋನು ರಾಜ್ಯಪಾಲರನ್ನು ಭೇಟಿಯಾಗಬಹುದಾದರೆ ಜನಸಾಮಾನ್ಯ ಯಾಕಿಲ್ಲ? ಸಿಎಂ ಬೆಂಬಲಿಗ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 17, 2024 | 8:10 PM

ರಾಜ್ಯಪಾಲರನ್ನು ಭೇಟಿಯಾಗುವವರೆಗೆ ರಾಜಭವನದ ಮುಂದಿಂದ ಕದಲುವುದಿಲ್ಲ ಹೇಳಿ ಅಲ್ಲೇ ನೆಲದ ಮೇಲೆ ಕುಳಿತ ಸಿದ್ದರಾಮಯ್ಯ ಬೆಂಬಲಿಗರನ್ನು ಎಬ್ಬಿಸಿ ಕಳಿಸುವ ಪ್ರಯತ್ನ ಪೊಲೀಸರು ಮಾಡಿದರೂ ಹಟಕ್ಕೆ ಬಿದ್ದ ಅವರು ಕುಳಿತ ಸ್ಥಳದಿಂದ ಕದಲಲಿಲ್ಲ, ಹಾಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆಯುವುದು ಅನಿವಾರ್ಯವಾಯಿತು.

ಬೆಂಗಳೂರು: ಮುಡಾ ಹಗರಣದಲ್ಲಿ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರೋದು ಅವರ ಬೆಂಬಲಿಗರನ್ನು ರೊಚ್ಚಿಗೆಬ್ಬಿಸಿದೆ. ಹತ್ತನ್ನೆರಡು ಜನರ ಗುಂಪೊಂದು ಇಂದು ಸಿದ್ದರಾಮಯ್ಯನವರ ವಿರುದ್ಧ ಯಾಕೆ ಸ್ಯಾಂಕ್ಷನ್ ನೀಡಿದ್ದಾರೆ ಅಂತ ಕೇಳಲು ರಾಜಭವನಕ್ಕೆ ತೆರಳಿದ್ದರು. ಆದರೆ ಪೊಲೀಸರು ಅವರಿಗೆ ಒಳಗೆ ಹೋಗುವ ಅವಕಾಶ ನೀಡಲಿಲ್ಲ. ನಂತರ ಮಾಧ್ಯಮದವರೊಂದಿಗೆ ಮಾತಾಡಿದ ಯುವಕರ ಗುಂಪಿನ ಮುಖ್ಯಸ್ಥ, ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಹಗೆ ಸಾಧಿಸಲಾಗುತ್ತಿದೆ, ರಾಜ್ಯಪಾಲರ ಬಳಿ ಬೇರೆ ಎಷ್ಟು ಫೈಲುಗಳಿವೆ? ಕೇವಲ ಸಿದ್ದರಾಮಯ್ಯನವರ ಫೈಲ್ ಮಾತ್ರ ಇತ್ತೇ? ಇದನ್ನೆಲ್ಲ ಕೇಳಲು ನಾವು ರಾಜ್ಯಪಾಲರಲ್ಲಿಗೆ ಹೋಗಬೇಕೆಂದರೆ ಪೊಲೀಸರು ತಡೆಯುತ್ತಿದ್ದಾರೆ. ರೋಲ್ ಕಾಲ್ ಮಾಡುವವರಿಗೆ, ಕಳ್ಳಕಾಕರಿಗೆ ಒಳಗೆ ಪ್ರವೇಶವಿದೆ , ನಮಗಿಲ್ಲವೇ? ಎಂದು ಅವರು ಪ್ರಶ್ನಿಸಿದರು. ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂಗೆ ಅವರನ್ನು ರೋಲ್ ಕಾಲ್​ ಮಾಡುವವ ಅಂತ ಸಿದ್ದರಾಮಯ್ಯ ಬೆಂಬಲಿಗ ಉಲ್ಲೇಖಿಸಿರಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜ್ಯಪಾಲರಿಂದ ಪ್ರಾಸಿಕ್ಯೂಷನ್​ಗೆ ಅನುಮತಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿವೈ ವಿಜಯೇಂದ್ರ ಆಗ್ರಹ