AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ಸಿನಿಮಾ ವರದಿಗಾರ್ತಿ ಮಂಗಳಾ ರಾಜಗೋಪಾಲ್​ ಅವರಿಗೆ ‘ಬೆಸ್ಟ್ ಸಿನಿಮಾ ರಿಪೋರ್ಟರ್’ ಪ್ರಶಸ್ತಿ

ಟಿವಿ9 ಸಿನಿಮಾ ವರದಿಗಾರ್ತಿ ಮಂಗಳಾ ರಾಜಗೋಪಾಲ್​ ಅವರಿಗೆ ‘ಬೆಸ್ಟ್ ಸಿನಿಮಾ ರಿಪೋರ್ಟರ್’ ಪ್ರಶಸ್ತಿ

ಗಂಗಾಧರ​ ಬ. ಸಾಬೋಜಿ
|

Updated on:Aug 17, 2024 | 9:17 PM

Share

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಟಿಎನ್​ಐಟಿ ಅವಾರ್ಡ್​ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಮಾಧ್ಯಮಗಳ ಸಿನಿಮಾ ವಿಭಾಗದಲ್ಲಿ ಟಿವಿ9 ಸಿನಿಮಾ ವರದಿಗಾರ್ತಿ ಮಂಗಳಾ ರಾಜಗೋಪಾಲ್​ ಅವರಿಗೆ ‘ಬೆಸ್ಟ್ ಸಿನಿಮಾ ರಿಪೋರ್ಟರ್’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಟಿಎನ್​ಐಟಿ ಸಂಸ್ಥೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ.

ಬೆಂಗಳೂರು, ಆಗಸ್ಟ್​ 17: ದಕ್ಷಿಣ ಭಾರತದ ಮಾಧ್ಯಮಗಳ ಸಿನಿಮಾ ವಿಭಾಗದಲ್ಲಿ ಟಿವಿ9 ಸಿನಿಮಾ ವರದಿಗಾರ್ತಿ ಮಂಗಳಾ ರಾಜಗೋಪಾಲ್​ ಅವರಿಗೆ ‘ಬೆಸ್ಟ್ ಸಿನಿಮಾ ರಿಪೋರ್ಟರ್’ ಪ್ರಶಸ್ತಿ ಲಭಿಸಿದೆ. ‘ದ ನ್ಯೂ ಇಂಡಿಯನ್​ ಟೈಮ್ಸ್​​’ (TNIT) ಸಂಸ್ಥೆ ವತಿಯಿಂದ ಮಾಧ್ಯಮ ಕ್ಷೇತ್ರದ ಸಾಧಕರಿಗೆ ಪ್ರತಿ ವರ್ಷದಂತೆ ಈ ವರ್ಷವೂ ಅವಾರ್ಡ್ ನೀಡಲಾಗಿದೆ.​ ನಗರದ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮಾಡಲಾಗಿದೆ. ನಟಿ ಮಾಲಾಶ್ರೀ ಹಾಗೂ ಪುತ್ರಿ ಆರಾಧನ ಅವರಿಂದ ಪ್ರಶಸ್ತಿ ಪಡೆದುಕೊಂಡಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. 

 

Published on: Aug 17, 2024 09:15 PM
Follow Us
Gangadhar Saboji
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More