B Saroja Devi Passes Away: ಅಭಿನಯ ಸರಸ್ವತಿಯ ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ

Updated on: Jul 15, 2025 | 12:43 PM

ನಿನ್ನೆ ತುರ್ತು ಕಾರ್ಯಕ್ರಮದ ನಿಮಿತ್ತ ಇಂಡಿಗೆ ಹೋದ ಕಾರಣ ಸರೋಜಾದೇವಿಯವರ ಅಂತಿಮ ದರ್ಶನ ಪಡೆಯಲಾಗಿರಲಿಲ್ಲ, ಅವರನ್ನು ಹಲವಾರು ಸಲ ಭೇಟಿಯಾಗಿದ್ದೆ, ಎಲ್ಲರೊಂದಿಗೆ ಬಹಳ ಆತ್ಮೀಯತೆ ಮತ್ತು ಪ್ರೀತಿಯಿಂದ ಮಾತಾಡುತ್ತಿದ್ದರು, ಅವರ ಸಿನಮಾಗಳನ್ನು ನೋಡಿದ್ದೇನೆ, ರಾಜ್​ಕುಮಾರ್ ಮತ್ತು ಸರೋಜಾದೇವಿ ಬಹಳ ಜನಪ್ರಿಯ ಜೋಡಿ ಅನಿಸಿಕೊಂಡಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು, ಜುಲೈ 15: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಗಲಿದ ಬಹುಭಾಷಾ ನಟಿ ಮತ್ತು ಅಪ್ಪಟ ಕನ್ನಡತಿ ಬಿ ಸರೋಜಾದೇವಿಯವರ ಮಲ್ಲೇಶ್ವರಂನಲ್ಲಿರುವ ಮನೆಗೆ ತೆರಳಿ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಅವರು ಸರೋಜಾ ದೇವಿಯವರ ಮಗಳು ಹಾಗೂ ಮಗನೊಂದಿಗೆ ಮಾತಾಡಿ ಸಾಂತ್ವನ ಹೇಳಿದರು. ಚಿತ್ರನಟ ನಟಿಯರು ಇಹಲೋಕದ ಯಾತ್ರೆ ಮುಗಿಸಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಗಳಿಗೆ ತೆರಳಿ ದರ್ಶನ ಪಡೆದು ಶ್ರದ್ಧಾಂಜಲಿಯನ್ನು ಸಲ್ಲಿಸುತ್ತಾರೆ. ಅವರ ಜೊತೆ ಸಮಾಜ ಕಲ್ಯಾಣ ಸಚಿವ ಡಾ ಹೆಚ್ ಸಿ ಮಹದೇವಪ್ಪ ಮತ್ತು ವಸತಿ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಇದ್ದರು. ಹಿರಿಯ ನಟ ಸುಂದರರಾಜ್ ಅವರನ್ನು ಸಹ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ:   ಸಾಯುವುದಕ್ಕೂ ಮೊದಲು ಸರೋಜಾದೇವಿಗೆ ಏನಾಗಿತ್ತು? ಇಲ್ಲಿದೆ ಕೊನೆಯ ಕ್ಷಣಗಳ ವಿವರ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ