ಸುಧಾಮೂರ್ತಿ ದಂಪತಿ ಸಮೀಕ್ಷೆ ನಿರಾಕರಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕಿಡಿ: ಹೇಳಿದ್ದಿಷ್ಟು
ಜಾತಿ ಗಣತಿ ಶುರುವಾಗಿ 27 ದಿನಗಳೇ ಕಳೆದರೂ ಸಮೀಕ್ಷೆ ಸಂಘರ್ಷ ನಿಲ್ತಿಲ್ಲ. ಕೆಲವರು ಸಮೀಕ್ಷೆಗೆ ಸ್ಪಂದಿಸಿದರೆ, ಇನ್ನೂ ಕೆಲವರು ನಿರಾಕರಿಸ್ತಿದ್ದಾರೆ. ಇತ್ತೀಚೆಗೆ ಸುಧಾಮೂರ್ತಿ ದಂಪತಿ ಸಮೀಕ್ಷೆಗೆ ನಿರಾಕರಿಸಿದ್ದರು. ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ.
ಬೆಂಗಳೂರು, ಅಕ್ಟೋಬರ್ 18: ರಾಜ್ಯ ಸರ್ಕಾರ ಸೆಪ್ಟೆಂಬರ್ 22 ರಿಂದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಆರಂಭಿಸಿದಾಗಿನಿಂದ್ಲೂ, ಗಣತಿ ಜಟಾಪಟಿ ನಡೀತಾನೆ ಇದೆ. ಮೊನ್ನೆಯಷ್ಟೇ ಇನ್ಫೋಸಿಸ್ ಸುಧಾಮೂರ್ತಿ ದಂಪತಿ ಸಮೀಕ್ಷೆಗೆ ನಿರಾಕರಿಸಿದ್ದರು. ಇದು ಹಿಂದುಳಿದವರ ಸಮೀಕ್ಷೆ.. ನಾವು ಪಾಲ್ಗೊಳ್ಳಲ್ಲ ಅನ್ನೋ ಹಿಂಬರಹ ಬರೆದು ಕಳಿಸಿದ್ದರು. ಇದೇ ವಿಚಾರ ಕಾಂಗ್ರೆಸ್ ನಾಯಕರನ್ನ ಕೆರಳಿಸಿದೆ. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಇದು ಹಿಂದುಳಿದವರ ಸಮೀಕ್ಷೆಯಲ್ಲ. ಸುಧಾಮೂರ್ತಿ ದಂಪತಿ ತಪ್ಪು ತಿಳಿದಿದ್ದಾರೆ. ಇದು ಕೇವಲ ಹಿಂದುಳಿದವರ ಸಮೀಕ್ಷೆ ಅನ್ನೋ ಭಾವನೆ ತಪ್ಪು ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

