ಸಿರಿಧಾನ್ಯ ಸೇವೆನೆ ಮಹತ್ವವನ್ನು ಪರಿಣಿತ ವೈದ್ಯನಂತೆ ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ!

|

Updated on: Jan 05, 2024 | 6:17 PM

ತಾವು ಚಿಕ್ಕವರಾಗಿದ್ದಾಗ ಹೆಚ್ಚು ನೀರಿಲ್ಲದ, ಕಡಿಮೆ ಫಲವತ್ತಾದ ಜಮೀನುಗಳಲ್ಲಿ ಸಿರಿಧಾನ್ಯಗಳಾದ ರಾಗಿ, ಜೋಳ, ಅರ್ಕ, ಸಾಮೆ ಮೊದಲಾದವುಗಳನ್ನು ಬೆಳೆಯಲಾಗುತ್ತಿತ್ತು ಎಂದು ಸಿದ್ದರಾಮಯ್ಯ ಹೇಳಿದರು. ವಿಜ್ಞಾನ ಈಗ ಬಹಳ ಮುಂದುವರಿದಿರುವುದರಿಂದ ಸಿರಿಧಾನ್ಯಗಳಿಂದ ಬಗೆಬಗೆಯ ಆಹಾರ ಪದಾರ್ಥ ಮತ್ತು ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭಾಷಣ ಮಾಡುವಾಗ ತಮ್ಮ ಬಾಲ್ಯದ ದಿನಗಳನ್ನು ಮೆಲಕು ಹಾಕುವುದನ್ನು ಕನ್ನಡಿಗರು ಗಮನಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ (Palace Grounds) ಇಂದು ಸಿರಿಧಾನ್ಯ ಮೇಳ (Millets Mela) ಉದ್ಘಾಟನೆ ಮಾಡಿದ ಬಳಿಕ ಮಾತಾಡಿದ ಅವರು, ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಮಹತ್ವ ವಿವರಿಸುತ್ತಾ ತಾವು ಚಿಕ್ಕವರಾಗಿದ್ದಾಗ ಹೆಚ್ಚು ನೀರಿಲ್ಲದ, ಕಡಿಮೆ ಫಲವತ್ತಾದ ಜಮೀನುಗಳಲ್ಲಿ ಸಿರಿಧಾನ್ಯಗಳಾದ ರಾಗಿ, ಜೋಳ, ಅರ್ಕ, ಸಾಮೆ ಮೊದಲಾದವುಗಳನ್ನು ಬೆಳೆಯಲಾಗುತ್ತಿತ್ತು ಎಂದು ಹೇಳಿದರು. ವಿಜ್ಞಾನ ಈಗ ಬಹಳ ಮುಂದುವರಿದಿರುವುದರಿಂದ ಸಿರಿಧಾನ್ಯಗಳಿಂದ ಬಗೆಬಗೆಯ ಆಹಾರ ಪದಾರ್ಥ ಮತ್ತು ಭಕ್ಷ್ಯಗಳನ್ನು ತಯಾರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸಿರಿಧಾನ್ಯಗಳ ಸೇವನೆ ಯಾಕೆ ಮುಖ್ಯ ಅಂತ ಹೇಳುವಾಗ ಸಿದ್ದರಾಮಯ್ಯ ಒಬ್ಬ ಪರಿಣಿತ ವೈದ್ಯನಂತೆ ಮಾತಾಡುತ್ತಾರೆ, ನಮ್ಮ ದೇಹಕ್ಕೆ ಅತ್ಯವಶ್ಯವಾಗಿ ಬೇಕಿರುವ ಸಾರಜನಕ, ವಿಟಮಿನ್ ಗಳು, ಲವಣಗಳು ಮತ್ತು ನಾರಿನಾಂಶ ಸಿರಿಧಾನ್ಯಗಳಲ್ಲಿ ಹೇರಳವಾಗಿ ಲಭ್ಯ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಚೆಲುವರಾಯಸ್ವಾಮಿ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ