AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವಾಗ ಶುರುವಾಗಲಿದೆ ಲೀಲಾವತಿ ಸ್ಮಾರಕ ನಿರ್ಮಾಣ ಕಾರ್ಯ? ಉತ್ತರ ನೀಡಿದ ವಿನೋದ್ ರಾಜ್​

ಯಾವಾಗ ಶುರುವಾಗಲಿದೆ ಲೀಲಾವತಿ ಸ್ಮಾರಕ ನಿರ್ಮಾಣ ಕಾರ್ಯ? ಉತ್ತರ ನೀಡಿದ ವಿನೋದ್ ರಾಜ್​

ಮದನ್​ ಕುಮಾರ್​
|

Updated on: Jan 05, 2024 | 5:14 PM

ನಟಿ ಲೀಲಾವತಿ ಅವರ ಒಂದು ತಿಂಗಳ ಪುಣ್ಯಸ್ಮರಣೆಯನ್ನು ಇಂದು (ಜ.5) ಮಾಡಲಾಗಿದೆ. ಅವರಿಗೆ ಇಷ್ಟವಾದ ಅಡುಗೆ ಮಾಡಿ ಸಮಾಧಿ ಮುಂದೆ ಇರಿಸಿ ಪೂಜೆ ಸಲ್ಲಿಸಲಾಗಿದೆ. ಬಳಿಕ ಮಾತನಾಡಿದ ವಿನೋದ್​ ರಾಜ್​ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೀಲಾವತಿ ಅವರ ಸ್ಮಾರಕ ನಿರ್ಮಾಣ ಮಾಡಲು ವಿನೋದ್​ ಸಜ್ಜಾಗಿದ್ದಾರೆ.

ಸ್ಯಾಂಡಲ್​ವುಡ್​ನ ಹಿರಿಯ ನಟಿ ಲೀಲಾವತಿ (Leelavathi) ಅವರು ಇಹಲೋಕ ತ್ಯಜಿಸಿ ಒಂದು ತಿಂಗಳು ಕಳೆದಿದೆ. ಪುತ್ರ ವಿನೋದ್ ರಾಜ್​ ಅವರು ಒಂದು ತಿಂಗಳ ಪುಣ್ಯಸ್ಮರಣೆಯ ಕಾರ್ಯವನ್ನು ಇಂದು (ಜನವರಿ 5) ನೆರವೇರಿಸಿದ್ದಾರೆ. ತಾಯಿಗೆ ಇಷ್ಟವಾದ ಅಡುಗೆ ಮಾಡಿ ಸಮಾಧಿ ಮುಂದೆ ಇರಿಸಿ ಪೂಜೆ ಮಾಡಲಾಗಿದೆ. ಬಳಿಕ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲೀಲಾವತಿ ಅವರ ಸ್ಮಾರಕ (Leelavathi Smaraka) ನಿರ್ಮಾಣ ಮಾಡಲು ವಿನೋದ್​ ರಾಜ್​ ಆಲೋಚಿಸಿದ್ದಾರೆ. ಆ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ‘ಜನವರಿ 16ರ ನಂತರ, ಸಂಕ್ರಾಂತಿ ಹಬ್ಬದ ಬಳಿಕ ಅಮ್ಮಾವರ ಸ್ಮಾರಕದ ಕೆಲಸ ಶುರು ಮಾಡುತ್ತೇನೆ. ಭಗವಂತನ ದಯೆ, ನಿಮ್ಮೆಲ್ಲರ ಆಶೀರ್ವಾದಿಂದ ಆದಷ್ಟು ಬೇಗ ಅದನ್ನು ಮಾಡಿ ಮುಗಿಸುತ್ತೇನೆ’ ಎಂದು ವಿನೋದ್​ ರಾಜ್​ (Vinod Raj) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ