ರಾಜಣ್ಣ ಹಾಗೂ ಸುರೇಶ್ ಜೊತೆ ಆರ್ಸಿಬಿ ಮತ್ತು ಡಿಸಿ ನಡುವಿನ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ
ಪಂದ್ಯದ ಬಗ್ಗೆ ಹೇಳುವುದಾದರೆ ಮೊದಲು ಬ್ಯಾಟ್ ಮಾಡಿದ ಸ್ಥಳೀಯ ತಂಡ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲವಾಯಿತು. ಟೀಮಿನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭರ್ಜರಿ ಫಾರ್ಮ್ನಲ್ಲಿ ಕಂಡರಾದರೂ14 ಎಸೆತಗಳಲ್ಲಿ 22 ರನ್ ಗಳಿಸಿ ತಮ್ಮ ಅಭಿಮಾನಿಗಳಿಗೆ ನಿರಾಶೆಗೊಳಿಸಿದರು. ನಿಗದಿತ 20 ಓವರ್ಗಳಲ್ಲಿ ಆರ್ಸಿಬಿ ಕೇವಲ 163/7 ಮೊತ್ತ ಮಾತ್ರ ಗಳಿಸಿದೆ.
ಬೆಂಗಳೂರು, ಏಪ್ರಿಲ್ 10: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಯಾವೆಲ್ಲ ಆಟಗಳನ್ನಾಡಿದ್ದಾರೋ ಗೊತ್ತಿಲ್ಲ, ಅದರೆ ಅವರಲ್ಲಿ ಕ್ರೀಡಾ ಮನೋಭಾವನೆ ಇರೋದನ್ನು ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸುವುದು, ಹುರಿದುಂಬಿಸುವುದನ್ನು ಆಗಾಗ್ಗೆ ನೋಡುತ್ತಿರುತ್ತೇವೆ. ಇವತ್ತು ನಗರದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯ ನೋಡಲು ಅವರು ಹಿರಿಯ ಸಂಪುಟ ಸಹೋದ್ಯೋಗಿ ಕೆಎನ್ ರಾಜಣ್ಣ ಮತ್ತು ಸಚಿವ ಬೈರತಿ ಸುರೇಶ್ ಅವರೊಂದಿಗೆ ಆಗಮಿಸಿದರು. ವಿಐಪಿ ಲೌಂಜ್ನಲ್ಲಿ ಕೂತು ಅವರು ಪಂದ್ಯ ವೀಕ್ಷಿಸುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: ಕಂದಾಯ ಸಚಿವ ಕೃಷ್ಣ ಭೈರೇಗೌಡರ ಕಾರ್ಯವೈಖರಿಯನ್ನು ಮನಸಾರೆ ಕೊಂಡಾಡಿದ ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Published on: Apr 10, 2025 10:39 PM