ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್: ಇಸ್ಲಾಂ ಸಮಾವೇಶದಲ್ಲಿ ಸಿಎಂ ಶಾಂತಿ ಭಾಷಣ
ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು(ಸೆಪ್ಟೆಂಬರ್ 05) ಮಿಲಾದ್ ಉನ್ ನಬಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸಿಎಂ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹ್ಮದ್ ಮತ್ತಿತರರು ಭಾಗಿಯಾಗಿದ್ದರು. ಕೊನೆಗೆ ಸಿದ್ದರಾಮಯ್ಯ ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್ ಎಂದು ಹೇಳಿ ಭಾಷಣ ಮುಗಿಸಿದರು.
ಬೆಂಗಳೂರು, (ಸೆಪ್ಟೆಂಬರ್ 05): ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು(ಸೆಪ್ಟೆಂಬರ್ 05) ಮಿಲಾದ್ ಉನ್ ನಬಿ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸಿಎಂ ರಾಜಕೀಯ ಕಾರ್ಯದರ್ಶಿ ನಾಸಿರ್ ಅಹ್ಮದ್ ಮತ್ತಿತರರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಿಎಂ, ಪ್ರವಾದಿ ಅವರು ಹುಟ್ಟಿ 1,500 ವರ್ಷಗಳಾಗಿದೆ ಎಂದು ಇತಿಹಾಸ ಹೇಳುತ್ತೆ. ಮಾನವ ಇತಿಹಾಸದಲ್ಲಿ ಅವರ ಬೋಧನೆಯಿಂದ ಕ್ರಾಂತಿಕಾರಕ ಬದಲಾವಣೆ. ಸಮಾಜದಲ್ಲಿ ಬಡವ, ಶ್ರೀಮಂತನೆಂಬ ಬೇಧ ಭಾವ ನಿವಾರಣೆಗೆ ಶ್ರಮಿಸಿದ್ದರು. ಸಾಮೂಹಿಕ ಪ್ರಾರ್ಥನೆ, ಪರಸ್ಪರ ಅಪ್ಪಿಕೊಳ್ಳುವುದು ಮಾನವೀಯತೆ ಸಂಕೇತ. ‘ಇಸ್ಲಾಂ ಅಂದರೆ ಶಾಂತಿ, ಪ್ರವಾದಿ ಮೊಹಮ್ಮದ್ ಅಂದರೆ ಶಾಂತಿದೂತ’. 12ನೇ ಶತಮಾನದಲ್ಲಿ ಬಸವಣ್ಣ ಸಮಸಮಾಜಕ್ಕಾಗಿ ಹೇಗೆ ಹೋರಾಡಿದ್ದರೋ ಅದೇ ರೀತಿ ಪ್ರವಾದಿ ಮೊಹಮ್ಮದ್ರವರು ಜೀವನದುದ್ದಕ್ಕೂ ಹೋರಾಡಿದ್ದರು. ಪ್ರವಾದಿ ಅವರು ಹೇಳಿದಂತೆ ನಡೆದುಕೊಳ್ಳುವುದು ಅವರಿಗೆ ಸಲ್ಲಿಸುವ ಗೌರವ. ಕಾರ್ಯಕ್ರಮಕ್ಕೆ ದೇಶದ ಹಲವೆಡೆಯಿಂದ ಮುಸ್ಲಿಂ ಧರ್ಮಗುರುಗಳು ಬಂದಿದ್ದೀರಿ. ಇಂತಹ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಕ್ಕೆ ಬಹಳ ಸಂತಸವಾಗುತ್ತಿದೆ ಎಂದು ಹೇಳಿದರು ಕೊನೆಗೆ ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್ ಎಂದು ಹೇಳಿ ಭಾಷಣ ಮುಗಿಸಿದರು.

