ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ, 4 ತಿಂಗಳು ಲಾಕ್ ಮಾಡಿಕೊಳ್ಳಿ: ಹರ್ಷಿಕಾ ಹೀಗೆ ಹೇಳಿದ್ದು ಯಾಕೆ?
ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರು ಪ್ರೀತಿಸಿ ಮದುವೆ ಆದರು. ಮದುವೆ ಬಳಿಕ ಭುವನ್ ಅವರು ಫ್ಯಾಮಿಲಿಗಾಗಿ ಬ್ರೇಕ್ ತೆಗೆದುಕೊಂಡರು. ಈಗ ಅವರು ನಟನೆಗೆ ಮರಳಿದ್ದಾರೆ. ಯೋಗರಾಜ್ ಭಟ್ ಜೊತೆ ‘ಹಲೋ 123’ ಸಿನಿಮಾ ಮಾಡುತ್ತಿದ್ದಾರೆ. ಈ ಸುದ್ದಿಗೋಷ್ಠಿಯಲ್ಲಿ ಹರ್ಷಿಕಾ ಪೂಣಚ್ಚ ಕೂಡ ಭಾಗಿ ಆಗಿದ್ದರು.
ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ (Bhuvan Ponnanna) ಪ್ರೀತಿಸಿ ಮದುವೆಯಾದರು. ವಿವಾಹದ ನಂತರ ಭುವನ್ ಅವರು ಕುಟುಂಬಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದರು. ಈಗ ಅವರು ಮತ್ತೆ ನಟನೆಗೆ ಮರಳಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಜೊತೆ ‘ಹಲೋ 123’ ಸಿನಿಮಾವನ್ನು ಭುವನ್ ಮಾಡುತ್ತಿದ್ದಾರೆ. ಈ ಚಿತ್ರದ ಸುದ್ದಿಗೋಷ್ಠಿಯಲ್ಲಿ ಹರ್ಷಿಕಾ ಪೂಣಚ್ಚ (Harshika Poonacha) ಸಹ ಭಾಗಿಯಾಗಿದ್ದರು. ಯೋಗರಾಜ್ ಭಟ್ ಜೊತೆ ಭುವನ್ ಸಿನಿಮಾ ಮಾಡುತ್ತಿರುವುದಕ್ಕೆ ಹರ್ಷಿಕಾ ಅವರಿಗೆ ಖುಷಿ ಇದೆ. ‘ಯೋಗರಾಜ್ ಭಟ್ ಸರ್ ಮತ್ತು ಹರಿಕೃಷ್ಣ ಸರ್ ನಮ್ಮ ಕನ್ನಡ ಚಿತ್ರರಂಗದ ದಿಗ್ಗಜರು. ನನ್ನ ಗಂಡನನ್ನು ನಿಮಗೆ ಒಪ್ಪಿಸಿದ್ದೇನೆ. ಸಿನಿಮಾಗಾಗಿ ಅವರನ್ನು 3-4 ತಿಂಗಳು ಲಾಕ್ ಮಾಡಿಕೊಳ್ಳಿ. ನನಗೆ ಏನೂ ತೊಂದರೆ ಇಲ್ಲ. ಅವರನ್ನು ಒಬ್ಬ ದೊಡ್ಡ ನಟನನ್ನಾಗಿ ಮಾಡಿಕೊಡಿ’ ಎಂದು ಹರ್ಷಿಕಾ ಮನವಿ ಮಾಡಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

