ಡಾ.ಮಂಜುನಾಥ್ ಗೆಲುವು; ನೂರೊಂದು ತೆಂಗಿನಕಾಯಿ ಒಡೆದು ಹರಕೆ ತೀರಿಸಿದ ಬೆಂಬಲಿಗರು

|

Updated on: Jun 04, 2024 | 6:32 PM

ಲೋಕಸಭಾ ಚುನಾವಣೆ ಫಲಿತಾಂಶ ಬಂದಿದ್ದು, ಅದರಂತೆ ರಾಜ್ಯದಲ್ಲಿ ಬಿಜೆಪಿಯು 17, ಕಾಂಗ್ರೆಸ್​ 09 ಹಾಗೂ ಜೆಡಿಎಸ್​ 02 ಕ್ಷೇತ್ರಗಳನ್ನು ವಶ ಪಡಿಸಿಕೊಂಡಿದೆ. ಅದರಂತೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ(Bengaluru Rural) ಕ್ಷೇತ್ರದಲ್ಲಿ ಘಟಾನುಘಟಿ ನಾಯಕ ಡಿಕೆ ಸುರೇಶ್ ಅವರನ್ನು 2,69, 590 ಅಂತರದಲ್ಲಿ ಸೋಲಿಸಿ ಡಾ.ಮಂಜುನಾಥ್(CN Manjunath)ಗೆಲುವು ಸಾಧಿಸಿದ್ದಾರೆ. ಈ ಹಿನ್ನಲೆ ಅವರ ಬೆಂಬಲಿಗರು ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು.

ಬೆಂಗಳೂರು ಗ್ರಾಮಾಂತರ, ಜೂ.04: ಬಹುದಿನಗಳಿಂದ ಕಾದಿದ್ದ ಲೋಕಸಭಾ ಚುನಾವಣೆ ಫಲಿತಾಂಶ ಬಂದಿದೆ. ಅದರಂತೆ ರಾಜ್ಯದಲ್ಲಿ ಬಿಜೆಪಿಯು 17, ಕಾಂಗ್ರೆಸ್​ 09 ಹಾಗೂ ಜೆಡಿಎಸ್​ 02 ಕ್ಷೇತ್ರಗಳನ್ನು ವಶ ಪಡಿಸಿಕೊಂಡಿದೆ. ಅದರಂತೆ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರು ಗ್ರಾಮಾಂತರ(Bengaluru Rural) ಕ್ಷೇತ್ರದಲ್ಲಿ ಘಟಾನುಘಟಿ ನಾಯಕ ಡಿಕೆ ಸುರೇಶ್ ಅವರನ್ನು 2,69, 590 ಅಂತರದಲ್ಲಿ ಸೋಲಿಸಿ ಡಾ.ಮಂಜುನಾಥ್(CN Manjunath)ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ರಾಜಕೀಯ ಪಾಳಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಈ ಹಿನ್ನಲೆ ಬೆಂಗಳೂರಿನ ಬನ್ನೇರುಘಟ್ಟ ಸರ್ಕಲ್​ನಲ್ಲಿ ಚಂಪಕಧಾಮ ದೇವಾಲಯದ ಬಳಿ ಮಂಜುನಾಥ್​ ಬೆಂಬಲಿಗರು ನೂರೊಂದು ತೆಂಗಿನಕಾಯಿ ಒಡೆದು ಹರಕೆ ತೀರಿಸಿ,  ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ರಾಜ್ಯದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ