ಥರಗುಟ್ಟುವ ಚಳಿಯಿಂದ ಬೀದರ್ ಜನ ಕಂಗಾಲು, ರೆಡ್ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ
ಬೀದರ್ ನಗರದ ಹಿರಿಯರೊಬ್ಬರು ನಮ್ಮ ವರದಿಗಾರನೊಂದಿಗೆ ಮಾತಾಡಿದ್ದು ಅವರು ಹೇಳುವ ಪ್ರಕಾರ ಸಾಯಂಕಾಲ 5 ಗಂಟೆಗೆ ಶುರುವಾಗುವ ಚಳಿ ಮರುದಿನ ಬೆಳಗ್ಗೆ 11 ಗಂಟೆಯವರೆಗೆ ಇರುತ್ತಂತೆ. ಮೊದಲಾದರೆ ಇವರು ಬೆಳಗಿನ ಜಾವ 4.30 ಕ್ಕೆಲ್ಲ ವಾಕ್ ಗೆ ಅಂತ ಮನೆಯಿಂದ ಹೊರಬೀಳುತ್ತಿದ್ದರಂತೆ, ಈಗ ಸೂರ್ಯೋದಯದ ನಂತರ ಆಚೆ ಬರುತ್ತಿದ್ದಾರೆ.
ಬೀದರ್: ಈ ಜಿಲ್ಲೆಯನ್ನು ರಾಜ್ಯದ ಮುಕುಟ ಅಂತ ಕರೆಯುತ್ತಾರೆ. 2024ಡಿಸೆಂಬರ್ ಚಳಿ ಜಿಲ್ಲೆಯ ಜನರನ್ನು ಒಂದು ಬಗೆಯ ಭೀತಿಗೆ ದೂಡಿದೆ. ನಮ್ಮ ವರದಿಗಾರ ಹೇಳುವಂತೆ ಇಲ್ಲಿನ ಕನಿಷ್ಟ ತಾಪಮಾನ 6-8ಡಿಗ್ರಿ ಸೆಲ್ಸಿಯಸ್ ಇದೆ! ಇದು ಥರಗುಟ್ಟಿಸುವ ಮತ್ತು ಮೈ ಕೊರೆಯುವ ವಾತಾವರಣ. ಬೀದರ್ ಜನ ಬೆಳಗಿನ ವಾಕ್ ಬರೋದನ್ನು ನಿಲ್ಲಿಸಿಬಿಟ್ಟಿದ್ದಾರೆ ಮತ್ತು ಶಾಲೆಗಳಿಗೆ ಹೋಗುವ ಮಕ್ಕಳಂತೂ ಸ್ವೆಟರ್, ಜರ್ಕಿನ್ ತಲೆಗೆ ಟೋಪಿ ಧರಿಸಿ ಹೋಗುತ್ತಿದ್ದಾರಂತೆ. ಚಳಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಚಳಿ ಇನ್ನೂ ಜಾಸ್ತಿಯಿರುವುದರಿಂದ ಹೊಲ ಗದ್ದೆಗಳಿಗೆ ಹೋಗುವ ರೈತಾಪಿ ಜನ ಬಿಸಿಲೇರಿದ ಬಳಿಕ ಹೋಗುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Weather: ಉತ್ತರ ಕರ್ನಾಟಕದ ಕೆಲವೆಡೆ ಶೀತ ವಾತಾವರಣ, ಬೆಂಗಳೂರಲ್ಲಿ ಚಳಿಯೂ ಇಲ್ಲ, ಮಳೆಯೂ ಇಲ್ಲ