ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿಕೊಂಡಿದ್ದಾನೆ: ಮಡೆನೂರು ಮನು ಮೇಲೆ ಆರೋಪಗಳ ಸುರಿಮಳೆ

Edited By:

Updated on: May 22, 2025 | 10:29 PM

ತಮ್ಮ ಮೇಲೆ ಹಲವು ಬಾರಿ ಮಡೆನೂರು ಮನು ಅತ್ಯಾಚಾರ ಮಾಡಿದ್ದಾನೆ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ. ಈ ವಿವಾದದ ಬಗ್ಗೆ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ಹುಷಾರಿಲ್ಲದ ನನಗೆ ಬಲವಂತವಾಗಿ ಕುಡಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಖಾಸಗಿ ವಿಡಿಯೋ ಮಾಡಿಕೊಂಡಿದ್ದಾನೆ’ ಎಂದು ಆಕೆ ಹೇಳಿದ್ದಾರೆ.

ಸ್ನೇಹಿತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದಲ್ಲಿ ‘ಕಾಮಿಡಿ ಕಿಲಾಡಿಗಳು’ (Comedy Khiladigalu) ನಟ ಮಡೆನೂರು ಮನು (Madenur Manu) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನು ಮೇಲೆ ಸ್ನೇಹಿತೆ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ‘ಮಡೆನೂರು ಮನು ನನ್ನನ್ನು ನಂಬಿಸಿ ಮೋಸ ಮಾಡಿದ್ದಾನೆ. ಅತ್ಯಾಚಾರ ಮಾಡಿದ ಬಳಿಕ ಮದುವೆ ಆಗುತ್ತೇನೆ ಅಂತ ಹೇಳಿದ್ದ. ಎಲ್ಲರ ಮುಂದೆ ಹೇಳಿ ಮದುವೆ ಆದರೆ ನರಕ ತೋರಿಸುತ್ತೇನೆ ಅಂತ ಹೆದರಿಸಿದ್ದ. ಹುಷಾರಿಲ್ಲದ ನನಗೆ ಬಲವಂತವಾಗಿ ಕುಡಿಸಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಖಾಸಗಿ ವಿಡಿಯೋ ಮಾಡಿಕೊಂಡು ಹೋಗಿದ್ದಾನೆ. ಡಿಲೀಟ್ ಮಾಡಿದ್ದೇನೆ ಅಂತ ಹೇಳಿದ್ದ. ಆದರೆ ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಇಷ್ಟು ವಿಕೃತಿ ಮೆರೆಯುವ ಅವನಿಗೆ ಶಿಕ್ಷೆ ಆಗಲೇಬೇಕು’ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.