AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಖಕ್ಕೆ ಬೂದಿ ಎರಚಿ ವಶೀಕರಣ ಮಾಡುತ್ತಿದ್ದ: ಮಡೆನೂರು ಮನು ಮೇಲೆ ಸ್ನೇಹಿತೆ ಆರೋಪ

ನಟ ಮಡೆನೂರು ಮನು ಅವರು ಸ್ನೇಹಿತೆಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ ಅವರನ್ನು ಬಂಧಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ಥ ಮಹಿಳೆಯೇ ಮಾತನಾಡಿದ್ದಾರೆ. ಮಡೆನೂರು ಮನು ಮತ್ತು ತಮ್ಮ ನಡುವೆ ಯಾವ ರೀತಿಯ ಸಂಬಂಧ ಇತ್ತು ಎಂಬುದನ್ನು ಆಕೆ ವಿವರಿಸಿದ್ದಾರೆ.

ಮುಖಕ್ಕೆ ಬೂದಿ ಎರಚಿ ವಶೀಕರಣ ಮಾಡುತ್ತಿದ್ದ: ಮಡೆನೂರು ಮನು ಮೇಲೆ ಸ್ನೇಹಿತೆ ಆರೋಪ
Madenur Manu Case
Malatesh Jaggin
| Updated By: ಮದನ್​ ಕುಮಾರ್​|

Updated on: May 22, 2025 | 8:42 PM

Share

ನಟ ಮಡೆನೂರು ಮನು ಬಗ್ಗೆ ಸಹ-ನಟಿಯೇ ಅತ್ಯಾಚಾರದ ಆರೋಪ ಮಾಡಿದ್ದಾರೆ. ಈ ಬಗ್ಗೆ ಟಿವಿ9ಗೆ ಮೊದಲ ಬಾರಿಗೆ ಸಂತ್ರಸ್ಥ ಮಹಿಳೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಲವ್ ಮಾಡಿಲ್ಲ. ನನಗೆ ಅವನು ಬೆಸ್ಟ್ ಫ್ರೆಂಡ್ ಆಗಿದ್ದ. ಅದನ್ನೇ ದುರ್ಬಳಕೆ ಮಾಡಿಕೊಂಡ. ಅವನು ಮಾಡಿರುವುದು ಅತ್ಯಾಚಾರ. ಅವನಿಗೆ ಮದುವೆ ಆಗಿ, ಮಗಳು ಇದ್ದಾಳೆ. ಅಂಥವನನ್ನು ನಾನು ಯಾಕೆ ಲವ್ ಮಾಡಲಿ? ಅತ್ಯಾಚಾರ ಮಾಡುವಾಗ ಅವನ ತಲೆಯಲ್ಲಿ ಬುದ್ಧಿ ಇರಲಿಲ್ಲವಾ? ಬೇರೆ ಯಾರೋ ನನ್ನ ಮೇಲೆ ಅತ್ಯಾಚಾರ ಮಾಡಿದ್ದರೆ ಮುಲಾಜಿಲ್ಲದೇ ದೂರು ನೀಡುತ್ತಿದ್ದೆ. ಆದರೆ ಮನು (Madenur Manu) ನನ್ನ ಬೆಸ್ಟ್ ಫ್ರೆಂಡ್. ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಮದುವೆ ಆಗಿ ಮಗಳು ಇರುವವನು ನನ್ನ ಮೇಲೆ ಕೆಟ್ಟ ದೃಷ್ಟಿ ಬೀರಲ್ಲ ಅಂತ ನಾನು ನಂಬಿದ್ದೆ’ ಎಂದಿದ್ದಾರೆ ಸಂತ್ರಸ್ಥ ಮಹಿಳೆ.

‘ಅವನು ಏನೇನೋ ಮಾಡುತ್ತಿದ್ದ. ಮಾಟ ಮಂತ್ರ ಇದೆಯೋ ಇಲ್ಲವೋ ಗೊತ್ತಿಲ್ಲ. ಅವನು ಮಾಡುತ್ತಿದ್ದ ರೀತಿ ನನಗೆ ಮಂಕು ಮಾಡಲು ಶುರು ಮಾಡಿತು. ಬೂದಿ ತಂದು ಮುಖಕ್ಕೆ ಎರಚುವುದು ಮತ್ತು ವಶೀಕರಣ ಮಾಡುತ್ತಿದ್ದ. ಅದರಿಂದ ನಾನು ಮಂಕಾದೆ. ಪದೇಪದೇ ಗರ್ಭಪಾತ ಆಯಿತು. ಒಂದು ಮಗು ಉಳಿಸಿಕೊಳ್ಳುತ್ತೇನೆ ಅಂತ ಹೇಳಿದೆ. ಈಗ ಬೇಡ, 2 ವರ್ಷ ಬಿಟ್ಟು ಎಲ್ಲರಿಗೂ ಹೇಳೋಣ ಎಂದಿದ್ದ. ಹಿಂಸೆ ಕೊಟ್ಟು ಗರ್ಭಪಾತ ಮಾಡಿಸಿದ’ ಎಂದು ಸಂತ್ರಸ್ಥ ಮಹಿಳೆ ಆರೋಪ ಮಾಡಿದ್ದಾರೆ.

‘ತನ್ನ ಹೆಂಡತಿ ಸರಿ ಇಲ್ಲ, ಮನೆಯಲ್ಲಿ ಸಹಕರಿಸಲ್ಲ ಅಂತ ನನಗೆ ಹೇಳಿದ್ದ. ಈ ಮಾತಿಗೆ ಸಾಕ್ಷಿ ಇದೆ. ಇದೆನ್ನೆಲ್ಲ ಹೇಳಿ ನನ್ನನ್ನು ನಂಬಿಸಿದ. ಆಮೇಲೆ ಬೇಡ ಅಂದ. ನಾನೇನು ಆಟದ ಮೈದಾನವಾ ಅಂತ ಜೋರಾಗಿ ಜಗಳ ಮಾಡಿದೆ. ತನಗೆ ಆಂಟಿ ಸಹವಾಸ ಇದೆ ಅಂತ ಕೂಡ ಅವರನು ಹೇಳಿದ್ದ. ನನಗೆ ಹೇಳಿದ ರೀತಿಯೇ ಬೇರೆ ಮಹಿಳೆಯರಿಗೂ ಹೇಳಿದ್ದಾನೆ. ಅದಕ್ಕೆ ಸಾಕ್ಷಿ ಇದೆ. ನ್ಯಾಯಾಲಯಕ್ಕೆ ನೀಡುತ್ತೇನೆ’ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ
Image
ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದೆ; ‘ಕಾಮಿಡಿ ಕಿಲಾಡಿ’ ಕಲಾವಿದರ ಜಗಳ ಬೀದಿಗೆ
Image
ಕನ್ನಡ ಕಿರುತೆರೆ ನಟಿಯ ಮೇಲೆ ಅತ್ಯಾಚಾರ; ನಟ ಮಡೆನೂರು ಮನು ವಿರುದ್ಧ FIR
Image
ಮೇ 23ಕ್ಕೆ ಕುಲದಲ್ಲಿ ಕೀಳ್ಯಾವುದೋ ರಿಲೀಸ್; ಕಾಮಿಡಿ ಕಿಲಾಡಿ ನಟನ ಹೊಸ ಜರ್ನಿ
Image
‘ಕುಲದಲ್ಲಿ ಕೀಳ್ಯಾವುದೋ’ ಟೈಟಲ್ ಸಿಕ್ಕಿದ್ದು ಅಣ್ಣಾವ್ರ ಆಶೀರ್ವಾದ: ಮಡೆನೂರು

‘ಕಾರ್ಯಕ್ರಮದ ಹಣ ನೀಡಲು ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ್ದ. ಏನು ಮಾಡಬೇಕು ಅಂತ ನನಗೆ ಗೊತ್ತಾಗಲಿಲ್ಲ. ಯಾಕೆಂದರೆ ಅವನು ನನ್ನ ಫ್ರೆಂಡ್. ಮಾಡಿದ ತಪ್ಪಿಗೆ ಸಮಾಧಾನ ಮಾಡುತ್ತೇನೆ ಎಂದಿದ್ದ. ಕಣ್ಣು ಮುಚ್ಚಿಕೋ, ನಿನಗೆ ಸರ್ಪ್ರೈಸ್ ನೀಡುತ್ತೇನೆ ಎಂದ. ಕಣ್ಣು ಮುಚ್ಚಿಕೊಂಡಾಗ ತಾಳಿ ಕಟ್ಟಿದ. ಅತ್ಯಾಚಾರ ಮಾಡಿ, ತಾಳಿ ಕಟ್ಟಿದರೆ ಇದಕ್ಕೆ ಏನು ಬೆಲೆ ಇದೆ ಅಂತ ನಾನು ಕೇಳಿದೆ. ತನ್ನ ತಂದೆ ಮತ್ತು ತಾತನಿಗೆ ಇಬ್ಬರು ಹೆಂಡತಿಯರು. ಹಾಗಾಗಿ ತನಗೂ ಇಬ್ಬರು ಹೆಂಡತಿಯರು ಎಂದ. ನನ್ನನ್ನು ರಾಣಿ ಥರ ನೋಡಿಕೊಳ್ಳುವುದಾಗಿ ಹೇಳಿದ. ಅದನ್ನು ನಾನು ಒಪ್ಪಿಕೊಳ್ಳಲಿಲ್ಲ’ ಎಂದಿದ್ದಾರೆ ಸಂತ್ರಸ್ಥ ಮಹಿಳೆ.

ಇದನ್ನೂ ಓದಿ: ಅತ್ಯಾಚಾರದ ಕೇಸ್ ನಡುವೆಯೇ ಮಡೆನೂರು ಮನು ನಟನೆಯ ಸಿನಿಮಾ ಈ ವಾರ ರಿಲೀಸ್

‘ಮಡೆನೂರು ಮನುಗಾಗಿ ನಾನೇ ಸಾಕಷ್ಟು ಹಣ ಖರ್ಚು ಮಾಡಿದ್ದೀನಿ. ಮನು ಜಿಮ್​ಗೆ ಹೋಗಲು ನಾನೇ ದುಡ್ಡು ಕೊಟ್ಟಿದ್ದೇನೆ. ಮುಂದಿನ ಸಿನಿಮಾ ತಮನ್ನಾ ಜೊತೆ ಎಂದು ಅವನು ಹೇಳಿಕೊಳ್ಳುತ್ತಿದ್ದ. ನೀನು ದಪ್ಪ ಇದಿಯ ಎಂದು ಹೀಯಾಳಿಸ್ತಿದ್ದ. ಡ್ರಿಂಕ್ಸ್ ತಂದು ನನಗೂ ಕುಡಿಸಿ ಖಾಸಗಿ ವಿಡಿಯೋ ಮಾಡ್ಕೊಂಡಿದ್ದಾನೆ. ನನಗೆ ಹುಷಾರಿಲ್ಲ ಅಂತ ಗೊತ್ತಿದ್ರೂ ಯೋಗಕ್ಷೇಮ ವಿಚಾರಿಸಲಿಲ್ಲ. ಬ್ಲಾಕ್ ಮೇಲ್ ಮಾಡಲು ಹೀಗೆಲ್ಲ ವಿಡಿಯೋ ಮಾಡಿಕೊಂಡ. ಇದನ್ನೆಲ್ಲ ಮಾಡಿದ್ದಾನೆ ಎಂದರೆ ಅವನ ಮನದಲ್ಲಿ ಎಷ್ಟು ಕ್ರೈರ್ಯ ಇರಬಹುದು. ಇದಕ್ಕಾಗಿ ನಾನು ದೂರು ನೀಡಿದ್ದಾರೆ’ ಎಂದು ಸಂತ್ರಸ್ಥ ಮಹಿಳೆ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ