ಈಶ್ವರಪ್ಪ ಹೇಳುತ್ತಿರುವುದೆಲ್ಲ ಶತ ಪ್ರತಿಶತ ಸತ್ಯ, ಅಪ್ಪ ಮಕ್ಕಳಿಂದ ಪಕ್ಷಕ್ಕೆ ಹಾನಿಯಾಗುತ್ತಿದೆ: ಬಸನಗೌಡ ಪಾಟೀಲ್ ಯತ್ನಾಳ್

|

Updated on: Mar 29, 2024 | 7:28 PM

ಈಶ್ವರಪ್ಪ ಅವರು ಪ್ರಧಾನಿ ಮೋದಿಯವರ ಒಂದೇ ಕರೆಗೆ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದರು. ಆದರೆ ಕೆಲವರು ಪಕ್ಷ ಬಿಟ್ಟು ಹೋಗಿ ವಾಪಸ್ ಬಂದು ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿದರು, ಹಿಂದೂತ್ವ ಬಗ್ಗೆ ಬಗ್ಗೆ ಮಾತಾಡುವ ನಾಯಕರನ್ನು ಕಡೆಗಣಿಸಲಾಗುತ್ತಿದೆ ಅದನ್ನು ಸರಿಪಡಿಸಬೇಕಿರುವ ಅಪ್ಪ-ಮಕ್ಕಳು ಏನೂ ಮಾಡುತ್ತಿಲ್ಲ ಎಂದು ಮತ್ತೊಮ್ಮೆ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಯತ್ನಾಳ್ ಕುಟುಕಿದರು.

ವಿಜಯಪುರ: ಬೆಳಗ್ಗೆ ನಗರಕ್ಕೆ ಹತ್ತಿರದ ಕಗ್ಗೊಡಲ್ಲಿರುವ ಗೋರಕ್ಷಾ ಕೇಂದ್ರದಲ್ಲಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮಧ್ಯಾಹ್ನದ ಹೊತ್ತಿಗೆ ನಗರಕ್ಕೆ ವಾಪಸ್ಸಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಅಭ್ಯರ್ಥಿಗಳು ಬಂಡಾಯ ಪ್ರವೃತ್ತಿ ತೋರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಎರಡೂ ಪಕ್ಷಗಳಲ್ಲಿ ಆಕಾಂಕ್ಷಿಗಳು ಜಾಸ್ತಿ ಇರುವುದರಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ (candidate selection) ಗೊಂದಲವುಂಟಾಗುತ್ತಿದೆ. ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವನಿಗೆ ಟಿಕೆಟ್ ಸಿಗದೆ ಹೊಸಬನೊಬ್ಬನಿಗೆ ಸಿಕ್ಕರೆ ಅದು ಬಂಡಾಯ ಪ್ರವೃತ್ತಿ ತಳೆಯಲು ಕಾರಣವಾಗುತ್ತದೆ ಮತ್ತು ಗೋ ಬ್ಯಾಕ್ ಅಭಿಯಾನಗಳು ಶುರುವಾಗುತ್ತವೆ ಎಂದು ಯತ್ನಾಳ್ ಹೇಳಿದರು. ಆದರೆ ಬಿಜೆಪಿ ಕಾರ್ಯಕರ್ತರ ಅಂತಿಮ ಗುರಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಮತ್ತೊಮ್ಮೆ ಆ ಸ್ಥಾನವನ್ನು ಅಲಂಕರಿಸಬೇಕು, ಹಿಂದೂತ್ವ ಗಟ್ಟಿಯಾಗಬೇಕು ಅನ್ನೋದಾಗಿದೆ ಎಂದು ಯತ್ನಾಳ್ ಹೇಳಿದರು.

ರಾಜ್ಯದಲ್ಲಿ ಸಾಕಷ್ಟು ಕಡೆ ಗೊಂದಲಗಳು ಸೃಷ್ಟಿಯಾಗಿವೆ, ಈಶ್ವರಪ್ಪ ಹೇಳುತ್ತಿರುವುದೆಲ್ಲ ಸತ್ಯ, ಅವರು ಪ್ರಧಾನಿ ಮೋದಿಯವರ ಒಂದೇ ಕರೆಗೆ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದರು. ಆದರೆ ಕೆಲವರು ಪಕ್ಷ ಬಿಟ್ಟು ಹೋಗಿ ವಾಪಸ್ ಬಂದು ಲೋಕಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿದರು, ಹಿಂದೂತ್ವ ಬಗ್ಗೆ ಬಗ್ಗೆ ಮಾತಾಡುವ ನಾಯಕರನ್ನು ಕಡೆಗಣಿಸಲಾಗುತ್ತಿದೆ ಅದನ್ನು ಸರಿಪಡಿಸಬೇಕಿರುವ ಅಪ್ಪ-ಮಕ್ಕಳು ಏನೂ ಮಾಡುತ್ತಿಲ್ಲ ಎಂದು ಮತ್ತೊಮ್ಮೆ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಯತ್ನಾಳ್ ಕುಟುಕಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಭಯೋತ್ಪಾದಕ ಚಟುವಟಿಕೆ ನಿಲ್ಲಿಸಲಾಗದಿದ್ದರೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ವಿಧಾನಸಭೆಯನ್ನು ವಿಸರ್ಜಿಸಲಿ: ಬಸನಗೌಡ ಪಾಟೀಲ್ ಯತ್ನಾಳ್

Published on: Mar 29, 2024 07:27 PM