‘ಯುವ’ ಚಿತ್ರದಲ್ಲಿ ಜವಾಬ್ದಾರಿಯುತ ತಂದೆ ಪಾತ್ರ ಮಾಡಿದ ಅಚ್ಯುತ್​ ಕುಮಾರ್​ ಸಂದರ್ಶನ

‘ಯುವ’ ಚಿತ್ರದಲ್ಲಿ ಜವಾಬ್ದಾರಿಯುತ ತಂದೆ ಪಾತ್ರ ಮಾಡಿದ ಅಚ್ಯುತ್​ ಕುಮಾರ್​ ಸಂದರ್ಶನ

ಮದನ್​ ಕುಮಾರ್​
|

Updated on: Mar 29, 2024 | 8:11 PM

‘ಯುವ’ ಸಿನಿಮಾದಲ್ಲಿ ಯುವ ರಾಜ್​ಕುಮಾರ್​ ಜೊತೆ ಅಚ್ಯುತ್​ ಕುಮಾರ್​ ಹಾಗೂ ಸಪ್ತಮಿ ಗೌಡ ಕೂಡ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ‘ಕಾಂತಾರ’ ಸಿನಿಮಾದಲ್ಲೂ ಸಪ್ತಮಿ ಗೌಡ ಮತ್ತು ಅಚ್ಯುತ್​ ಕುಮಾರ್​ ನಟಿಸಿದ್ದರು. ‘ಟಿವಿ 9 ಕನ್ನಡ’ ನಡೆಸಿದ ಸ್ಪೆಷಲ್​​ ಸಂದರ್ಶನದಲ್ಲಿ ಅವರಿಬ್ಬರು ಮಾತನಾಡಿದ್ದಾರೆ. ಪೂರ್ತಿ ಸಂದರ್ಶನ ಇಲ್ಲಿದೆ..

ಯುವ ರಾಜ್​ಕುಮಾರ್​ ನಟನೆಯ ‘ಯುವ’ ಸಿನಿಮಾ (Yuva Movie) ಇಂದು (ಮಾರ್ಚ್​ 29) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅಚ್ಯುತ್​ ಕುಮಾರ್ ಅವರು ಹೀರೋ ತಂದೆಯ ಪಾತ್ರ ಮಾಡಿದ್ದಾರೆ. ಅಂದರೆ, ಅಚ್ಯುತ್​ ಕುಮಾರ್​ (Achyuth Kumar) ಮತ್ತು ಯುವ ರಾಜ್​ಕುಮಾರ್​ ಅವರು ತಂದೆ-ಮಗನ ಪಾತ್ರ ನಿಭಾಯಿಸಿದ್ದಾರೆ. ತಮ್ಮದು ಜವಾಬ್ದಾರಿಯುತ ಅಪ್ಪನ ಪಾತ್ರ ಎಂದು ಅಚ್ಯುತ್​ ಕುಮಾರ್​ ಹೇಳಿದ್ದಾರೆ. ಅದ್ದೂರಿಯಾಗಿ ಈ ಸಿನಿಮಾ ತೆರೆಕಂಡಿದೆ. ‘ಯುವ’ ಸಿನಿಮಾದಲ್ಲಿ ನಾಯಕಿಯಾಗಿ ಸಪ್ತಮಿ ಗೌಡ (Sapthami Gowda) ಅಭಿನಯಿಸಿದ್ದಾರೆ. ‘ಪಾಪ್​ಕಾರ್ನ್​ ಮಂಕಿ ಟೈಗರ್​’, ‘ಕಾಂತಾರ’ ಬಳಿಕ ‘ಯುವ’ ಸಿನಿಮಾದಲ್ಲಿ ಅವರ ಪಾತ್ರ ಬೇರೆಯದೇ ರೀತಿ ಇದೆ. ‘ಟಿವಿ 9 ಕನ್ನಡ’ ನಡೆಸಿದ ವಿಶೇಷ ಸಂದರ್ಶನದಲ್ಲಿ ಅಚ್ಯುತ್ ಕುಮಾರ್​ ಮತ್ತು ಸಪ್ತಮಿ ಗೌಡ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಿನಿಮಾಗೆ ಸಂತೋಷ್​ ಆನಂದ್​ರಾಮ್​ ನಿರ್ದೇಶನ ಮಾಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಮೂಲಕ ‘ಯುವ’ ಚಿತ್ರ ನಿರ್ಮಾಣ ಆಗಿದೆ. ತೆರೆ ಹಿಂದಿನ ಅನೇಕ ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ. ಪಾತ್ರಗಳ ಆಯ್ಕೆ, ಫಿಟ್ನೆಸ್​ ಗುಟ್ಟು ಮುಂತಾದ ವಿಚಾರಗಳ ಬಗ್ಗೆ ಅಚ್ಯುತ್​ ಕುಮಾರ್​ ಮತ್ತು ಸಪ್ತಮಿ ಗೌಡ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.