ವಾಣಿಜ್ಯ ಸಿಲಿಂಡರ್ ದರ ಏರಿಕೆ: ಹೋಟೆಲ್​ನಲ್ಲಿ ಊಟ-ತಿಂಡಿ ದರ ಹೆಚ್ಚಾಗುತ್ತಾ? ಬೆಂಗಳೂರು ಹೋಟೆಲ್ ಮಾಲೀಕರು ಏನಂತಾರೆ?

Edited By:

Updated on: May 01, 2026 | 10:18 AM

ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 991 ರೂ. ಹೆಚ್ಚಳವಾಗಿದ್ದು, ಹೋಟೆಲ್ ಮಾಲೀಕರಿಗೆ ಭಾರಿ ಸಂಕಷ್ಟ ತಂದಿದೆ. ಯುದ್ಧದ ಪರಿಣಾಮದಿಂದ ಈಗಾಗಲೇ ನಷ್ಟದಲ್ಲಿದ್ದ ಹೋಟೆಲ್‌ಗಳು ಈಗ ಅನಿವಾರ್ಯವಾಗಿ ಊಟ-ತಿಂಡಿ ದರ ಹೆಚ್ಚಳಕ್ಕೆ ಮುಂದಾಗಿವೆ. ಕೂಲಿ ಕಾರ್ಮಿಕರು ಹಾಗೂ ಗ್ರಾಹಕರ ಮೇಲೆ ಹೊರೆ ಬೀಳುವುದಕ್ಕೆ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮೇ 1: ಕೇಂದ್ರ ಸರ್ಕಾರವು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ದಿಢೀರ್ 993 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ 991 ರೂ. ಏರಿಕೆಯಾಗಿದೆ. ಇದರಿಂದ ರಾಜಧಾನಿ ಬೆಂಗಳೂರಿನ ಹೋಟೆಲ್ ಉದ್ಯಮಕ್ಕೆ ಭಾರಿ ಆಘಾತ ಉಂಟಾಗಿದೆ. ಮೇ 1 ರಿಂದ ಜಾರಿಗೆ ಬಂದಿರುವ ಈ ದರ ಹೆಚ್ಚಳವು ಹೋಟೆಲ್ ಮಾಲೀಕರನ್ನು ಕಂಗಾಲು ಮಾಡಿದೆ. ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಕಳೆದ ಕೆಲವು ತಿಂಗಳಿಂದಲೇ ಹೋಟೆಲ್ ಮಾಲೀಕರು ಸಂಕಷ್ಟ ಎದುರಿಸುತ್ತಿದ್ದರು. ಸಿಲಿಂಡರ್‌ಗಳ ಕೊರತೆಯಿಂದ ಬ್ಲಾಕ್‌ನಲ್ಲಿ 4,000 ರಿಂದ 7,000 ರೂಪಾಯಿಗಳವರೆಗೂ ಹಣ ನೀಡಿ ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇದರಿಂದ ಹಲವು ಹೋಟೆಲ್‌ಗಳು ಮುಚ್ಚಲ್ಪಟ್ಟಿದ್ದವು ಅಥವಾ ಮೆನುವಿನಿಂದ ಎಣ್ಣೆಯಲ್ಲಿ ಮಾಡುವ ತಿಂಡಿಗಳನ್ನು ತೆಗೆದುಹಾಕಿದ್ದವು.

ಈಗ ಮತ್ತೆ ದರ ಹೆಚ್ಚಳದಿಂದ ಹೋಟೆಲ್‌ಗಳು ಊಟ, ತಿಂಡಿ, ಕಾಫಿ, ಟೀ ಬೆಲೆಗಳನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಆದಾಗ್ಯೂ ಗ್ರಾಹಕರು, ವಿಶೇಷವಾಗಿ ಕೂಲಿ ಕಾರ್ಮಿಕರ ಮೇಲೆ ಈ ಹೊರೆ ಹಾಕಲು ಹೋಟೆಲ್ ಮಾಲೀಕರು ಹಿಂಜರಿಯುತ್ತಿದ್ದಾರೆ. ಈ ಕ್ರಮವು ಪಂಚರಾಜ್ಯ ಚುನಾವಣೆಗಳ ನಂತರ ಕೇಂದ್ರ ಸರ್ಕಾರದಿಂದ ಬಂದ ಶಾಕ್ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More