ದಲಿತ ನಾಯಕರ ಸಭೆಯ ಬಗ್ಗೆ ವರಿಷ್ಠರ ಮುಂದೆ ಪರಮೇಶ್ವರ್ ಪ್ರಸ್ತಾವನೆ ಇಡಲಿದ್ದಾರೆ: ಸತೀಶ್ ಜಾರಕಿಹೊಳಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ತನ್ನ ಮತ್ತು ಡಿಕೆ ಸುರೇಶ್ ನಡುವೆ ಸ್ಪರ್ಧೆ, ತಿಕ್ಕಾಟ ನಡೆದಿದೆ ಎಂಬ ಅಂಶವನ್ನು ಸಚಿವ ಜಾರಕಿಹೊಳಿ ತಳ್ಳಿಹಾಕಿದರು. ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಇದುವರೆಗೆ ಯಾವುದೇ ತೀರ್ಮಾನ ಪ್ರಕಟಿಸಿಲ್ಲ, ಇನ್ನು ತನ್ನ ಮತ್ತು ಸುರೇಶ್ ನಡುವೆ ತಿಕ್ಕಾಟದ ಪ್ರಶ್ನೆ ಎಲ್ಲಿಂದ ಉದ್ಭವಿಸುತ್ತದೆ ಎಂದು ಜಾರಕಿಹೊಳಿ ಕೇಳಿದರು.
ಬೆಂಗಳೂರು: ಇವತ್ತು ನಗರದಲ್ಲಿ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ದಲಿತ ಮಂತ್ರಿಗಳು ಮತ್ತು ಶಾಸಕರು ನಡೆಸಬೇಕೆಂದಿರುವ ಮೀಟಿಂಗ್ ಬಗ್ಗೆ ಪಕ್ಷದ ವರಿಷ್ಠರ ಮುಂದೆ ಪ್ರಸ್ತಾಪ ಮಾಡಲಾಗುವುದೇ ಎಂದು ಕೇಳಿದ ಪ್ರಶ್ನೆಗೆ ಸತೀಶ್ ಜಾರಕಿಹೊಳಿ, ಅದರ ಬಗ್ಗೆ ತಮ್ಮ ಅಧ್ಯಕ್ಷರಾದ ಜಿ ಪರಮೇಶ್ವರ್ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ, ಅವರೇ ಸಮಿತಿಯ ಚೇರ್ಮನ್, ತಾನು ಸದಸ್ಯ ಮಾತ್ರ ಎಂದು ಮುಗುಳ್ನಗುತ್ತ ಹೇಳಿದರು. ಚಿತ್ರದುರ್ಗದಲ್ಲಿ ಸಮುದಾಯ ಸಮಾವೇಶವನ್ನೇನೂ ನಡೆಸುವ ನಿರ್ಧಾರ ಮಾಡಿಲ್ಲ ಎಂದು ಸಚಿವ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹಿಂದೆ ಹೇಳಿದ್ದನ್ನೇ ಪುನರಾವರ್ತಿಸಿದರು!