Bigg Boss Kannada: ಜನ ಸಾಮಾನ್ಯರಿಗೂ ಬಿಗ್ ಬಾಸ್ ಮನೆಗೆ ತೆರಳೋ ಅವಕಾಶ; ಚಾಲೆಂಜ್ ನೀಡಿದ ಕಲರ್ಸ್

Edited By:

Updated on: Sep 09, 2025 | 12:02 PM

ಕನ್ನಡ ಬಿಗ್ ಬಾಸ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 28ರಿಂದ ಶೋ ಆರಂಭ ಆಗಲಿದೆ. ಅದಕ್ಕೂ ಮೊದಲೇ ಶೋ ಬಗ್ಗೆ ಸುದ್ದಿ ಜೊರಾಗಿದೆ. ಈ ಶೋ ಆರಂಭಕ್ಕೂ ಮೊದಲೇ ಜನಸಾಮಾನ್ಯರಿಗೂ ದೊಡ್ಮನೆಗೆ ತೆರಳೋ ಅವಕಾಶ ಕಲ್ಪಿಸಲಾಗಿದೆ. ಹಾಗಂತ ಸ್ಪರ್ಧಿಗಳಾಗಿ ಅಲ್ಲ, ಬದಲಿಗೆ ಅತಿಥಿಗಳಾಗಿ.

‘ಬಿಗ್ ಬಾಸ್ ಕನ್ನಡ ಸೀಸನ್ 12’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಕಲರ್ಸ್​ನಲ್ಲಿ ಹೊಸ ಘೋಷಣೆ ಒಂದನ್ನು ಮಾಡಲಾಗಿದೆ. ​ ಸೆಪ್ಟೆಂಬರ್ 8ರಿಂದ 12ವರೆಗೆ ಕಲರ್ಸ್ ಧಾರಾವಾಹಿಗಳನ್ನು ವೀಕ್ಷಿಸಿ, ಸರಳ ಪ್ರಶ್ನೆಗೆ ಹಾಟ್​​ಸ್ಟಾರ್​​ನಲ್ಲಿ ಉತ್ತರಿಸುವ ಮೂಲಕ ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಬರೋ ಅವಕಾಶ ಪಡೆಯಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 09, 2025 11:20 AM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More