ತಮ್ಮ ಸ್ವಾರ್ಥ ಸಾಧನೆಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಮತಾಂಧ ಶಕ್ತಿಗಳನ್ನು ಸದೆಬಡಿಯಲಾಗುವುದು: ಆರಗ ಜ್ಞಾನೇಂದ್ರ

ತಮ್ಮ ಸ್ವಾರ್ಥ ಸಾಧನೆಗೆ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವ ಮತಾಂಧ ಶಕ್ತಿಗಳನ್ನು ಸದೆಬಡಿಯಲಾಗುವುದು: ಆರಗ ಜ್ಞಾನೇಂದ್ರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 11, 2022 | 5:18 PM

ಸಮಾಜದ ಸ್ವಾಸ್ಥ್ಯವನ್ನು ಕದಡುವ ಇಂಥ ಸನ್ನಿವೇಶಗಳು ಹೇಗೆ ಸೃಷ್ಟಿಯಾಗುತ್ತವೆ, ಯಾರು ಈ ಬಗೆಯ ಕೃತ್ಯಗಳಿಗೆ ಪ್ರಚೋದನೆ ಮತ್ತು ಕುಮ್ಮಕ್ಕು ನೀಡುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಸಚಿವರು, ‘ಇದರ ಬಗ್ಗೆ ತನಿಖೆ ನಡೆಯುತ್ತಿದೆ, ಪೊಲೀಸರು ವಿವಾದ ಸೃಷ್ಟಿಸುವ ಶಕ್ತಿಗಳನ್ನು ಪತ್ತೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಹೇಳಿದರು.

ರಾಜ್ಯ ಹೈಕೋರ್ಟ್ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುವ ಕುರಿತಂತೆ ಒಂದು ಮಧ್ಯಂತರ ಅದೇಶವನ್ನು (interim order) ನೀಡಿದೆ. ಆ ಹಿನ್ನೆಲೆಯಲ್ಲಿ ಸೋಮವಾದಿಂದ ಹೈಸ್ಕೂಲ್ (high schools) ಗಳನ್ನು ನಡೆಸುವುದಾಗಿ ಕರ್ನಾಟಕ ಸರ್ಕಾರ ಹೇಳಿದೆ. ಅದರೆ, ಹೈಕೋರ್ಟಿನ ಹೊರತಾಗಿಯೂ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಧಾರ್ಮಿಕತೆಯನ್ನು (religion) ಪ್ರತಿಬಿಂಬಿಸುವ ದಿರಿಸು ಧರಿಸಿ ಬಂದರೆ ಹೇಗೆ ಎಂಬ ಆತಂಕ ಕಾಡುವುದು ಸಹಜವೇ. ಶುಕ್ರವಾರದಂದು ಬೆಂಗಳೂರಿನಲ್ಲಿ ಇದೇ ಆತಂಕವನ್ನು ಮಾಧ್ಯಮದವರು ಗೃಹ ಸಚಿವ ಆರಗ ಜ್ಞಾನೇಂದ್ರ (home minister Araga Jnanendra) ಅವರ ಎದುರು ವ್ಯಕ್ತಪಡಿಸಿದಾಗ, ಸಚಿವರು ಅಂಥ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಲಾಗಿದೆ, ಪೋಲಿಸರು ಅಂಥ ಪ್ರದೇಶಗಳ ಮೇಲೆ ಕಣ್ಣಿಟ್ಟಿದ್ದು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಹಾಗೆ ನೋಡಿದರೆ, ಕೋರ್ಟಿನ ಆದೇಶವನ್ನು ಉಲ್ಲಂಘಿಸುವ ಪ್ರಯತ್ನ ಹಿಂದೆ ನಮ್ಮ ರಾಜ್ಯದಲ್ಲಿ ನಡೆದಿಲ್ಲ, ಅದರೂ ಸರ್ಕಾರ ಎಚ್ಚರದಿಂದರಬೇಕಾದ ಅವಶ್ಯಕತೆಯಂತೂ ಇದೆ.

ಸಮಾಜದ ಸ್ವಾಸ್ಥ್ಯವನ್ನು ಕದಡುವ ಇಂಥ ಸನ್ನಿವೇಶಗಳು ಹೇಗೆ ಸೃಷ್ಟಿಯಾಗುತ್ತವೆ, ಯಾರು ಈ ಬಗೆಯ ಕೃತ್ಯಗಳಿಗೆ ಪ್ರಚೋದನೆ ಮತ್ತು ಕುಮ್ಮಕ್ಕು ನೀಡುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಸಚಿವರು, ‘ಇದರ ಬಗ್ಗೆ ತನಿಖೆ ನಡೆಯುತ್ತಿದೆ, ಪೊಲೀಸರು ವಿವಾದ ಸೃಷ್ಟಿಸುವ ಶಕ್ತಿಗಳನ್ನು ಪತ್ತೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸ ಹಾಳಾಗಿ ಹೋಗಲಿ, ಅದರೆ ಧಾರ್ಮಿಕ ಉಡುಗೆ-ತೊಡುಗೆ ಬಹಳ ಮುಖ್ಯ ಎಂದು ಮಕ್ಕಳನ್ನು ಪ್ರಚೋದಿಸುವ ಶಕ್ತಿ ಮತ್ತು ವ್ಯಕ್ತಿಗಳನ್ನು ಗುರುತಿಸುವ ಕೆಲಸ ಜಾರಿಯಲ್ಲಿದೆ, ಅಂಥ ಶಕ್ತಿಗಳನ್ನು ಮಟ್ಟ ಹಾಕಲಾಗುವುದು,’ ಎಂದು ಹೇಳಿದರು.

‘ಈಗ ಸೃಷ್ಟಿಯಾಗಿರುವ ಸ್ಥಿತಿ ಕೆಲವು ಮತಾಂಧ ಶಕ್ತಿಗಳ ಪೂರ್ವ-ನಿಯೋಜಿತ ಕೃತ್ಯ ಅನ್ನೋದು ಬೆಳಕಿಗೆ ಬಂದಿದೆ ಮತ್ತು ನಮ್ಮ ಪೊಲೀಸರು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ,’ ಎಂದು ಗೃಹ ಸಚಿವರು ಹೇಳಿದರು.

‘ಈ ಶಕ್ತಿಗಳು ರಾಜ್ಯದಲ್ಲಿ ಮೊದಲ ಬಾರಿಗೆ ಅಮಾಯಕ ವಿದ್ಯಾರ್ಥಿಗಳನ್ನು ತಮ್ಮ ಹೀನ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಸಮಸ್ಯೆ ರಾಜ್ಯದೆಲ್ಲೆಡೆ ತಲೆದೋರಿಲ್ಲ. ಕೇವಲ ಕರಾವಳಿ ಪ್ರದೇಶ, ಹೊರನಾಡು ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಅಲ್ಲದೆ ಕಲಬುರಗಿಯ ಒಂದರೆಡು ಕಡೆಗಳಲ್ಲಿ ವಿವಾದ ಉಂಟಾಗಿದೆ. ಸಂಪೂರ್ಣ ವಿವರಗಳನ್ನು ಹೇಳಲಾಗದು, ಅದರೆ ಆ ಶಕ್ತಿಗಳಿಗೆ ಮಟ್ಟ ಹಾಕಲಾಗುವುದು,’ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:   ಹಿಜಾಬ್ ವಿವಾದ: ಡಾ.ಎ.ಪಿ.ಜೆ ಅಬ್ದುಲ್ ಕಲಾಂರ ಸಂದೇಶದ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾದ ಕಲಾವಿದ