ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ದೂಷಿಸುವ ಭರದಲ್ಲಿ ಭಾಷೆ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ!
ಸಿಂಹ ಅವರು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ ನೆಹರೂ ಅವರಿಂದು ಶುರು ಮಾಡುತ್ತಾರೆ. ನೆಹರೂ ಹೆಸರನ್ನು ಸಂಸದರು ಉಲ್ಲೇಖಿಸುವುದಿಲ್ಲವಾದರೂ, 1962 ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದಾಗ ಅದರ ಎದುರು ಮಂಡಿಯೂರಿದ ನಪುಂಸಕ ಪ್ರಧಾನಿ ಯಾರು ಮತ್ತು ಅವರು ಯಾವ ಪಕ್ಷದವರಾಗಿದ್ದರು ಅಂತ ಕೇಳುತ್ತಾರೆ
ಮೈಸೂರು: ಆರೆಸ್ಸೆಸ್ ಮೂಲದ ಬಗ್ಗೆ ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡೆಯುತ್ತಿರುವ ಮಾತಿನ ಮತ್ತು ಟ್ವೀಟ್ ಜಗಳ ಮರ್ಯಾದೆಯ ಚೌಕಟನ್ನು ಮೀರಿದೆ. ಇದುವರೆಗೆ ಸುಸಂಸ್ಕೃತ ಭಾಷೆಯಲ್ಲಿ ನಡೆಯುತಿದ್ದ ಪರಸ್ಪರ ವಾಗ್ದಾಳಿ ಉಲ್ಲೇಖಾರ್ಹವಲ್ಲದ ಪದಗಳಿಗೆ ಇಳಿದುಬಿಟ್ಟಿದೆ. ಇದು ಆರಂಭವಾಗಿದ್ದು ಕೆಪಿಸಿಸಿ (KPCC) ಒಂದು ಟ್ವೀಟ್ ನಿಂದ ಮಾರಾಯ್ರೇ. ಆ ಟ್ವೀಟ್ ಆಧಾರದಲ್ಲೇ ಟಿವಿ9 ಕನ್ನಡ ವಾಹಿನಿಯ ಕನ್ನಡ ವರದಿಗಾರ ರಾಮ್ ಸೋಮವಾರ ಬಿಜೆಪಿ ಸಂಸದ ಪ್ರತಾಪ ಸಿಂಹ (Pratap Simha) ಅವರನ್ನು ಮಾತಾಡಿಸಿದಾಗ ಅವರು ಹಲವಾರು ಬಾರಿ ನಪುಂಸಕ ಪದವನ್ನು ಬಳಸಿದರು.
ಸಿಂಹ ಅವರು ಭಾರತದ ಮೊದಲ ಪ್ರಧಾನ ಮಂತ್ರಿ ಪಂಡಿತ ಜವಾಹರಲಾಲ ನೆಹರೂ ಅವರಿಂದು ಶುರು ಮಾಡುತ್ತಾರೆ. ನೆಹರೂ ಹೆಸರನ್ನು ಸಂಸದರು ಉಲ್ಲೇಖಿಸುವುದಿಲ್ಲವಾದರೂ, 1962 ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ನಡೆಸಿದಾಗ ಅದರ ಎದುರು ಮಂಡಿಯೂರಿದ ನಪುಂಸಕ ಪ್ರಧಾನಿ ಯಾರು ಮತ್ತು ಅವರು ಯಾವ ಪಕ್ಷದವರಾಗಿದ್ದರು ಅಂತ ಕೇಳುತ್ತಾರೆ. 1971 ರಲ್ಲಿ ಶರಣಾಗತರಾಗಿದ್ದ ಪಾಕಿಸ್ತಾನದ 90 ಸಾವಿರ ಯುದ್ಧಕೈದಿಗಳನ್ನು ಬಿಡುಗಡೆ ಮಾಡಿ ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿ ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟ ಭಾರತದಲ್ಲಿ ಯಾವ ನಪುಂಸಕ ಸರ್ಕಾರ ಅಧಿಕಾರದಲ್ಲಿತ್ತು, ಎಂದು ಅವರು ಕೇಳುತ್ತಾರೆ.
ಯಾಸಿನ್ ಮಲ್ಲಿಕ್ ನಂಥ ದೇಶದ್ರೋಹಿಯನ್ನು ಸನ್ಮಾನ ಮಾಡುವ ನಪುಂಸಕ ಸರ್ಕಾರವನ್ನು ಯಾರು ನಡೆಸುತ್ತಿದ್ದರು? ಮುಂಬೈ ಮೇಲೆ ಪಾಕ್ ಉಗ್ರರು ದಾಳಿ ನಡೆಸಿದಾಗ ಪಾಕಿಸ್ತಾನದ ವಿರುದ್ಧ ಒಂದು ಮಾತನ್ನೂ ಆಡದ ನಪುಂಸಕ ಸರ್ಕಾರ ಯಾರದ್ದಾಗಿತ್ತು? ಶ್ರೀನಗರದ ಲಾಲ್ ಚೌಕ್ನಲ್ಲಿ ಪಾಕಿಸ್ತಾನದ ಬಾವುಟ ಹಾರಿಸಿದರೂ ಚಕಾರವೆತ್ತದೆ ತೆಪ್ಪಗಿದ್ದ ನಪುಂಸಕರು ಯಾರು? ಅಲ್ಲಿ ತಿರಂಗವನ್ನು ಹಾರಿಸಿದ ಮುರಳಿ ಮನೋಹರ ಜೋಷಿ ಮತ್ತು ಈಗ ಪ್ರಧಾನ ಮಂತ್ರಿಯಾಗಿರುವ ನರೇಂದ್ರ ಮೋದಿಯವರು ಆರೆಸ್ಸೆಸ್ ಸಂಘಟನೆಯಿಂದ ಬಂದವರು ಅಂತ ಕಾಂಗ್ರೆಸ್ ಅರಿತುಕೊಳ್ಳಲಿ ಎಂದು ಸಿಂಹ ಹೇಳಿದರು.
ಇಷ್ಟು ಮಾತ್ರ ಅಲ್ಲ, ಕಾಂಗ್ರೆಸ್ ಮಾಡಿರುವ ಕೆಲಸಗಳಲೆಲ್ಲ ನಪುಂಸಕತೆ ನಿಚ್ಚಳವಾಗಿ ಗೋಚರವಾಗುತ್ತದೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.