ಮುಂದಿನ ವರ್ಷವೇ ಅಸೆಂಬ್ಲಿ ಚುನಾವಣೆ: ವಿರೋಧ ಪಕ್ಷಗಳ ನಾಯಕರು ಬಿಜೆಪಿಗೆ ಹೋಗುತ್ತಿರುವ ವಿದ್ಯಮಾನದ ಹಿಂದಿನ ರಹಸ್ಯ ಏನು? ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆ
TV 9 Kannada Digital Live: ಇದ್ದಕ್ಕಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರು ಬಿಜೆಪಿ ಸೇರುತ್ತಿರುವ ವಿದ್ಯಮಾನ ಶುರುವಾಗಿದೆ. ರಾಜಕೀಯ ಗಾಳಿ ಯಾವ ಕಡೆ ಬೀಸುತ್ತಿದೆ ಎಂಬುದನ್ನು ರಾಜಕಾರಣಿಗಳು ಖಚಿತವಾಗಿ ಬಲ್ಲರು. ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ ಇದು ರಾಜಕೀಯ ದಿಕ್ಸೂಚಿಯಾದೀತಾ? ಏನೀ ವಿದ್ಯಮಾನದ ಹಿಂದಿನ ರಹಸ್ಯ?
ಬಿಜೆಪಿಯ ವಿರುದ್ಧ ಕಾಂಗ್ರೆಸ್ ಅನೇಕ ಆರೋಪಗಳನ್ನು ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ಬಿಜೆಪಿಯನ್ನು (BJP) ಸೋಲಿಸಲು ಸದೃಢವಾಯ್ತೇನೋ ಎಂಬ ಭಾವನೆ. ಆದರೆ ಈ ಮಧ್ಯೆ, ಇದ್ದಕ್ಕಿದ್ದಂತೆ ಕಾಂಗ್ರೆಸ್ (Congress) ಮತ್ತು ಜೆಡಿಎಸ್ ಪಕ್ಷದ (JDS) ನಾಯಕರು ಬಿಜೆಪಿ ಸೇರುತ್ತಿರುವ ವಿದ್ಯಮಾನ ಶುರುವಾಗಿದೆ. ರಾಜಕೀಯ ಗಾಳಿ ಯಾವ ಕಡೆ ಬೀಸುತ್ತಿದೆ ಎಂಬುದನ್ನು ರಾಜಕಾರಣಿಗಳು ಖಚಿತವಾಗಿ ಬಲ್ಲರು. ಮುಂದಿನ ವರ್ಷ ನಡೆಯಲಿರುವ ಅಸೆಂಬ್ಲಿ ಚುನಾವಣೆಗೆ (Karnataka Assembly Elections 2023) ಇದು ರಾಜಕೀಯ ದಿಕ್ಸೂಚಿಯಾದೀತಾ? ಒಂದೊಮ್ಮೆ ಕಾಂಗ್ರೆಸ್ ಕಡೆ ಗಾಳಿ ಬೀಸುತ್ತಿದೆ ಎಂದುಕೊಂಡರೆ ಆ ಪಕ್ಷದ ನಾಯಕರು ಬಿಜೆಪಿ ಸೇರುತ್ತಿರುವುದು ಏಕೆ? ಏನೀ ವಿದ್ಯಮಾನದ ಹಿಂದಿನ ರಹಸ್ಯ?
ಈ ವಿಷಯವನ್ನಿಟ್ಟುಕೊಂಡು ಆ್ಯಂಕರ್ ಚಂದ್ರಮೋಹನ್ ಇಂದಿನ ಟಿವಿ 9 ಕನ್ನಡ ಡಿಜಿಟಲ್ ಲೈವ್ ಚರ್ಚೆಯನ್ನು ಮಧ್ಯಾಹ್ನ 3.30 ಕ್ಕೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ (TV 9 Kannada Digital Live)
Published on: May 09, 2022 03:37 PM
Latest Videos