‘ಜನರ ಕೋರಿಕೆ ಮೇಲೆ ಹಂಪ್ ಹಾಕಲಾಗಿತ್ತು’; ಸುನೇತ್ರಾ ಅಪಘಾತದ ಬಗ್ಗೆ ಶಾಸಕ ರವಿ ಸುಬ್ರಮಣ್ಯ ಮಾತು

‘ಜನರ ಕೋರಿಕೆ ಮೇಲೆ ಹಂಪ್ ಹಾಕಲಾಗಿತ್ತು’; ಸುನೇತ್ರಾ ಅಪಘಾತದ ಬಗ್ಗೆ ಶಾಸಕ ರವಿ ಸುಬ್ರಮಣ್ಯ ಮಾತು

TV9 Web
| Updated By: ರಾಜೇಶ್ ದುಗ್ಗುಮನೆ

Updated on:May 08, 2022 | 8:07 PM

ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆ್ಯಕ್ಸಿಡೆಂಟ್ ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಮಾತನಾಡಿದ್ದಾರೆ.

ಕಿರುತೆರೆ ನಟಿ ಸುನೇತ್ರಾ ಪಂಡಿತ್ ಅವರು (Sunetra Pandit) ಶನಿವಾರ (ಮೇ 7) ಅಪಘಾತಕ್ಕೆ ಒಳಗಾದರು. ಬೆಂಗಳೂರಿನ (Bengaluru) ಎನ್.ಆರ್. ಕಾಲೋನಿಯ 9ನೇ ಅಡ್ಡರಸ್ತೆಯಲ್ಲಿ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಅವರು ಬೈಕ್​ ಸಮೇತ ಬಿದ್ದಿದ್ದಾರೆ. ಅವೈಜ್ಞಾನಿಕ ಹಂಪ್ ಮತ್ತು ರಸ್ತೆ ಗುಂಡಿ ಕಾರಣದಿಂದ ಆ್ಯಕ್ಸಿಡೆಂಟ್ (Accident) ಆಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆ ಕ್ಷೇತ್ರದ ಶಾಸಕ ರವಿ ಸುಬ್ರಮಣ್ಯ ಮಾತನಾಡಿದ್ದಾರೆ. ‘ಎನ್​.ಆರ್​. ಕಾಲೋನಿ ಹಳೆಯ ಏರಿಯಾಗಳು. ಅಲ್ಲಿನ ರಸ್ತೆಗಳು ಚಿಕ್ಕದಾಗಿವೆ. ಹಂಪ್ ಹಾಕಿದ್ರೆ ಅಪಘಾತ ತಡೆಯಬಹುದು ಎನ್ನುವ ಅಭಿಪ್ರಾಯ ಜನಗಳಲ್ಲಿದೆ. ಆದರೆ, ಅದು ತಪ್ಪು. ಹಂಪ್​ಗಳಿಂದ ಅಪಘಾತಗಳು ಸಂಭವಿಸುತ್ತವೆ. ಜನರ ಕೋರಿಕೆ ಮೇಲೆ ಹಂಪ್ ಹಾಕಲಾಗಿದೆ’ ಎಂದು ಹೇಳಿದ್ದಾರೆ ಎಂದಿದ್ದಾರೆ ಅವರು.

Published on: May 08, 2022 08:03 PM