ಜೈನಮುನಿ ಹತ್ಯೆ ಪ್ರಕರಣದಲ್ಲಿ ಒಂದು ನಿರ್ದಿಷ್ಟ ಕೋಮಿನ ಆರೋಪಿಯನ್ನು ಕಾಂಗ್ರೆಸ್ ಸರ್ಕಾರ ಸಂರಕ್ಷಿಸುವ ಪ್ರಯತ್ನ ಮಾಡುತ್ತಿದೆ: ಬಸನಗೌಡ ಯತ್ನಾಳ್

|

Updated on: Jul 10, 2023 | 4:40 PM

ನೀವು ವಿಷಯಾಂತರ ಮಾಡುತ್ತಿರುವಿರಿ, ಪರಮ ಪೂಜ್ಯ ಜೈನ ಮುನಿಗಳ ಪ್ರಸ್ತಾಪ ಮಾಡುತ್ತಾ ಬೇರೇನೋ ಹೇಳುತ್ತಿರುವಿರಿ ಎಂದು ಸ್ಪೀಕರ್ ಖಾದರ್ ಹೇಳಿದರು,

ಬೆಂಗಳೂರು: ಜೈನಮುನಿ ಕಾಮಕುಮಾರನಂದಿ ಮಹಾರಾಜ (Kamakumara Nandi Maharaj)) ಅವರ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಸದನದಲ್ಲಿ ಇಂದು ಮಾತಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಮುನಿಗಳ ಕಠಿಣ ಜೀವನ ಕ್ರಮದ ಬಗ್ಗೆ ವಿವರಿಸಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿ ಹೋಗಿದೆ ಎಂದರು. ರವಿವಾರದಂದು ಟಿ ನರಸೀಪುರದಲ್ಲಿ ಹಿಂದೂ ಕಾರ್ಯಕರ್ತನೊಬ್ಬರ (Hindu activist) ಕೊಲೆಯಾಗಿದೆ ಮತ್ತು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪಾಕಿಸ್ತಾನದ ಧ್ವಜಗಳು ಹಾರಾಡುತ್ತಿವೆ ಎಂದು ಹೇಳಿದಾಗ ಕೆಲ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ಯುಟಿ ಖಾದರ್ ಸಹ ಮಧ್ಯೆ ಪ್ರವೇಶಿಸಿ ಯತ್ನಾಳ್ ಅವರಿಗೆ, ನೀವು ವಿಷಯಾಂತರ ಮಾಡುತ್ತಿರುವಿರಿ, ಪರಮ ಪೂಜ್ಯ ಜೈನ ಮುನಿಗಳ ಪ್ರಸ್ತಾಪ ಮಾಡುತ್ತಾ ಬೇರೇನೋ ಹೇಳುತ್ತಿರುವಿರಿ, ವಿಷಯದ ಮೇಲೆ ಮಾತಾಡಿ, ಉಳಿದ ಸಂಗತಿಗಳನ್ನು ಬೇರೆ ಸಮಯದಲ್ಲಿ ಮಾತಾಡಿ ಅನ್ನುತ್ತಾರೆ. ಆರೋಪಿಯಾಗಿರುವ ಒಂದು ಕೋಮಿನ ಸದಸ್ಯನನ್ನು ಉಳಿಸಲು ಕಾಂಗ್ರೆಸ್ ಸರ್ಕಾರ ಪೊಲೀಸ್ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಬಸನಗೌಡ ಪಾಟೀಲ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on