ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 6 ಮಹಿಳೆಯರಿಗೆ ಟಿಕೆಟ್ ನೀಡಿದೆ: ಸೌಮ್ಯ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ

|

Updated on: Apr 05, 2024 | 10:38 AM

ಕಳೆದ ಸಲ ಸಂಸತ್ತಿನಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಏಕೈಕ ಪ್ರತಿನಿಧಿಯಾಗಿದ್ದ ಡಿಕೆ ಸುರೇಶ್ ಮಾತ್ರ ರಾಜ್ಯದ ಸಮಸ್ಯೆಗಳನ್ನು ಚರ್ಚಸಿದರು. ಆದರೆ ಈ ಬಾರಿ ಬೇರೆ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದ ಸೌಮ್ಯ, ಕಾಂಗ್ರೆಸ್ ಪಕ್ಷವು 6 ಮಹಿಳೆಯರಿಗೆ, ಯುವಕರಿಗೆ, ಒಕ್ಕಲಿಗರಿಗೆ ಮತ್ತು ಶಿಕ್ಷಣ ತಜ್ಞರಿಗೆ ಟಿಕೆಟ್ ನೀಡಿದೆ ಎಂದರು.

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧೆಗಿಳಿದವರು ಆಲೌಟ್ ಪ್ರಚಾರ ಆರಂಭಿಸುವ ಮೊದಲು ಮಠಮಾನ್ಯ ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ರಾತ್ರಿ ದಕ್ಷಿಣ ಕರ್ನಾಟಕದ (southern Karnataka) ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಕೆಲ ಸಚಿವರು ಸುತ್ತೂರು ಮಠಕ್ಕೆ ಭೇಟಿ ನೀಡಿ ನಿರ್ಮಲಾನಂದ ಶ್ರೀಗಳ (Nirmalanada Sri) ಆಶೀರ್ವಾದ ಪಡೆದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬೆಂಗಳೂರು ದಕ್ಷಿಣ ಅಭ್ಯರ್ಥಿ ಸೌಮ್ಯರೆಡ್ಡಿ (Sowmya Reddy) ಬಿಜಿಎಸ್ ಸಂಸ್ಥೆಯು ಶೈಕ್ಷಣಿಕ, ವೈದ್ಯಕೀಯ ಮತ್ತು ಬೇರೆ ಹಲವಾರು ಕ್ಷೇತ್ರಗಳಲ್ಲಿ ಜನರಿಗೆ ಒದಗಿಸುತ್ತಿರುವ ಸೇವೆಯನ್ನು ಕೊಂಡಾಡಿದರು. ನಂತರ ಚುನಾವಣೆಯ ಬಗ್ಗೆ ಮಾತಾಡಿದ ಅವರು, ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಲೆ ಇದೆ, ಕಳೆದ ಹತ್ತು ವರ್ಷಗಳಿಂದ ಬಿಜೆಪಿ ಸರ್ಕಾರದ ಆಡಳಿತ ನೋಡಿರುವ ಜನ ಬೇಸತ್ತು ಬದಲಾವಣೆ ಬಯಸಿದ್ದಾರೆ. ಕಳೆದ ಸಲ ಸಂಸತ್ತಿನಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ಪಕ್ಷದ ಏಕೈಕ ಪ್ರತಿನಿಧಿಯಾಗಿದ್ದ ಡಿಕೆ ಸುರೇಶ್ ಮಾತ್ರ ರಾಜ್ಯದ ಸಮಸ್ಯೆಗಳನ್ನು ಚರ್ಚಸಿದರು. ಆದರೆ ಈ ಬಾರಿ ಬೇರೆ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದ ಸೌಮ್ಯ, ಕಾಂಗ್ರೆಸ್ ಪಕ್ಷವು 6 ಮಹಿಳೆಯರಿಗೆ, ಯುವಕರಿಗೆ, ಒಕ್ಕಲಿಗರಿಗೆ ಮತ್ತು ಶಿಕ್ಷಣ ತಜ್ಞರಿಗೆ ಟಿಕೆಟ್ ನೀಡಿದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಲೋಕಸಭಾ ಚುನಾವಣೆ ಮುಗಿಯುವವರೆಗೆ ಅಪ್ಪ-ಮಗನ ರಿಪೇರಿ ಕೆಲಸವನ್ನು ಬೇರೆಯವರಿಗೆ ವಹಿಸಿಕೊಟ್ಟಿದ್ದೇನೆ: ಬಸನಗೌಡ ಯತ್ನಾಳ್