ಕೊಳವೆ ಬಾವಿಯಲ್ಲಿ ಸಿಲುಕಿದ್ದ ಸಾತ್ವಿಕ್ ನನ್ನು ಕಾಪಾಡಿದ ರಕ್ಷಣಾ ತಂಡಗಳನ್ನು ಸನ್ಮಾನಿಸಿದ ವಿಜಯಪುರ ಜಿಲ್ಲಾಡಳಿತ
ಸಾತ್ವಿಕ್ ನನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೀಯಲ್ ಲೈಫ್ ಹೀರೊಗಳನ್ನು ವಿಜಯಪುರ ಜಿಲ್ಲಾಡಳಿತ ಸನ್ಮಾನಿಸಿತು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾಧಿಕಾರಿ ಟಿ ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಾಗವಾನ್ ಸೋನುವಾಣೆ ರಕ್ಷಣಾ ತಂಡಗಳ ಸದಸ್ಯರನ್ನು ಶಾಲು ಹೊದೆಸಿ ಸತ್ಕರಿಸಿದರು.
ವಿಜಯಪುರ: ವಿಜಯಪುರ ಜಿಲ್ಲಾಡಳಿತ (Vijayapura district administration) ಒಂದು ಅತ್ಯುತ್ತಮ ಮತ್ತು ಮಾದರಿಯ ಜೆಸ್ಚರ್ ಪ್ರದರ್ಶಿಸಿದೆ. ಜಿಲ್ಲೆಯ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ 2-ವರ್ಷ ವಯಸ್ಸಿನ ಸಾತ್ವಿಕ್ (Satwik) ಹೆಸರಿನ ಪುಟಾಣಿ ಕೊಳವೆ ಬಾವಿಯಲ್ಲಿ ಜಾರಿ ಸುಮಾರು 21 ಗಂಟೆಗಳ ಕಾಲ ಸೆಣಸಿದ್ದನ್ನು ಮತ್ತು ಮಗುವನ್ನು ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ರಕ್ಷಿಸಿದ್ದನ್ನು ನಾವು ಸವಿಸ್ತಾರವಾಗಿ ವರದಿ ಮಾಡಿದ್ದೇವೆ. ಸಾತ್ವಿಕ್ ನನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ರೀಯಲ್ ಲೈಫ್ ಹೀರೊಗಳನ್ನು (real life heroes) ವಿಜಯಪುರ ಜಿಲ್ಲಾಡಳಿತ ಸನ್ಮಾನಿಸಿತು. ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಜಿಲ್ಲಾಧಿಕಾರಿ ಟಿ ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಭಾಗವಾನ್ ಸೋನುವಾಣೆ ರಕ್ಷಣಾ ತಂಡಗಳ ಸದಸ್ಯರಿಗೆ ಹೂಮಾಲೆ ಹಾಕಿ, ಶಾಲು ಹೊದೆಸಿ ಸನ್ಮಾನಿಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಹೆಚ್ ಡಿ ಕುಮಾರಸ್ವಾಮಿ ನಿನ್ನೆ ರಕ್ಷಣಾ ತಂಡಗಳ ಕಾರ್ಯವನ್ನು ಕೊಂಡಾಡಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: 20 ಗಂಟೆ ಅನ್ನ, ನೀರು, ಗಾಳಿ-ಬೆಳಕು ಇಲ್ಲದೇ ಬದುಕಿ ಬಂದ: ಸಾತ್ವಿಕ್ ಆರೋಗ್ಯ ನೋಡಿ ವೈದ್ಯರೇ ಶಾಕ್!