20 ಗಂಟೆ ಅನ್ನ, ನೀರು, ಗಾಳಿ-ಬೆಳಕು ಇಲ್ಲದೇ ಬದುಕಿ ಬಂದ: ಸಾತ್ವಿಕ್ ಆರೋಗ್ಯ ನೋಡಿ ವೈದ್ಯರೇ ಶಾಕ್!

vijayapura Borewell Tragedy: ಕೋಟ್ಯಂತರ ಕರುನಾಡಿಗರ ಪ್ರಾರ್ಥನೆ ಕೊನೆಗೂ ಫಲ ಕೊಟ್ಟಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ಬೋರ್​ವೆಲ್​​ಗೆ ಬಿದ್ದಿದ್ದ ಪುಟ್ಟ ಮಗು ಸಾತ್ವಿಕ್ ಸಾವನ್ನೇ ಗೆದ್ದು ಬಂದಿದ್ದಾನೆ. ಒಂದಲ್ಲ.. ಎರಡಲ್ಲ. ಬರೋಬ್ಬರಿ 20 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ಬಳಿಕ ಮಗು ಅಪಾಯದಿಂದ ಪಾರಾಗಿದೆ. ಇನ್ನು ಮಗು ಬದುಕಿ ಬಂದಿದ್ದೆ ಒಂದು ದೊಡ್ಡ ಪವಾಡ ಎಂದು ಡಾಕ್ಟರ್​ ಅಚ್ಚರಿಗೊಂಡಿದ್ದಾರೆ.

20 ಗಂಟೆ ಅನ್ನ, ನೀರು, ಗಾಳಿ-ಬೆಳಕು ಇಲ್ಲದೇ ಬದುಕಿ ಬಂದ: ಸಾತ್ವಿಕ್ ಆರೋಗ್ಯ ನೋಡಿ ವೈದ್ಯರೇ ಶಾಕ್!
ಸಾತ್ವಿಕ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Apr 04, 2024 | 4:21 PM

ವಿಜಯಪುರ, (ಏಪ್ರಿಲ್ 04): ಜಿಲ್ಲೆಯ ಇಂಡಿ(Indi)  ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ (Borewell) ಬಿದ್ದಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಸಾತ್ವಿಕ್ (sathwik) ಬದುಕಿಬಂದಿದೆ. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ಮತ್ತು ಅಗ್ನಿ ಶಾಮಕ ಸಿಬ್ಬಂದಿ ಸತತ 20 ಗಂಟೆಗಳ ಕಾಲ ಸತತ ತೀವ್ರ ಕಾರ್ಚರಣೆ ನಡೆಸಿ ಸಾತ್ವಿಕ್​​ನನ್ನು ಜೀವಂತವಾಗಿ ಆಚೆ ತಂದಿದ್ದಾರೆ. 20 ಗಮಟೆಗಳ ಕಾಲ ಅನ್ನ, ನೀರು, ಗಾಳಿ, ಬೆಳಕು ಇಲ್ಲದೇ ಎರಡು ವರ್ಷದ ಮಗು ಬದುಕುಳಿದಿದ್ದೇ ಒಂದು ದೊಡ್ಡ ಪವಾಡ ಎಂದು ಸ್ವತಃ ವೈದ್ಯರೇ ಅಚ್ಚರಿಗೊಂಡಿದ್ದಾರೆ. ಇದೊಂದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸತತ 20 ಗಂಟೆಗಳ ಕಾಲ ಕಾರ್ಚಚರಣೆ ನಡೆಸಿ ಸಾತ್ವಿಕ್​ನನ್ನು ಜೀವಂತವಾಗಿ ಹೊರತಂದು ನೇರವಾಗಿ ಇಂಡಿ ಜಿಲ್ಲಾಸ್ಪತ್ರೆಗೆ ರವಾನಿಸಲಾಯ್ತು. ಬಳಿಕ ಇಂಡಿ ತಾಲೂಕು ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ಸೇರಿದಂತೆ ಅವರ ಸಿಬ್ಬಂದಿ, ಆಕ್ಸಿಜನ್, ಪಲ್ಸ್​ ರೇಟ್ ಸೇರಿದಂತೆ ಮಗುವಿನ ಆರೋಗ್ಯ ಸ್ಥಿತಿಯನ್ನು ಪರಿಶೀಲನೆ ಮಾಡಿದರು. ಬಳಿಕ ಮಗುವಿಗೆ ಏನು ಗಾಯಗಳಾಗಿಲ್ಲ. ಸಾತ್ವಿಕ್ ಅರಾಮಾಗಿದ್ದಾನೆ ಎಂದು ಅರ್ಚನಾ ಕುಲಕರ್ಣಿ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು. ಅಲ್ಲದೇ ಮಗುವಿನ ಆರೋಗ್ಯ ಕಂಡು ವೈದ್ಯರೇ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಕೊಳವೆಬಾವಿಗೆ ಬಿದ್ದ 2 ವರ್ಷದ ಸಾತ್ವಿಕ್ ಸಾವನ್ನು ಗೆದ್ದು ಬಂದ: 20 ಗಂಟೆಗಳ ಕಾರ್ಯಾಚರಣೆ ಹೇಗಿತ್ತು? ಇಲ್ಲಿದೆ ವಿವರ

ಮಗುವಿನ ಆರೋಗ್ಯ ತಪಾಸಣೆ ಬಳಿಕ ಸಿಟಿ ಸ್ಕ್ಯಾನ್ ಮಾಡಿಸಲು ಸಾತ್ವಿಕ್​ನನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಯ್ತು. ಇನ್ನು ಸಾತ್ವಿಕನ ಆರೋಗ್ಯ ತಪಾಸಣೆ ಮಾಡಿದ ಇಂಡಿ ಆಸ್ಪತ್ರೆ ವೈದ್ಯಾಧಿಕಾರಿ ಅರ್ಚನಾ ಕುಲಕರ್ಣಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಸಾತ್ವಿಕ ಆರಾಮವಾಗಿದ್ದಾನೆ. ತಲೆ ಕೆಳಗಾಗಿ ಬಿದ್ದಿರುವ ಹಿನ್ನೆಲೆ ಸಿಟಿ ಸ್ಕ್ಯಾನ್ ಮಾಡಲು ವಿಜಯಪುರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಇದೊಂದು ವೈದ್ಯಕೀಯ ಕ್ಷೇತ್ರಕ್ಕೆ ಸವಾಲು. ಪವಾಡ ರೀತಿಯಲ್ಲಿ ಸಾತ್ವಿಕ ಬದುಕುಳಿದಿದ್ದಾನೆ ಎಂದು ಎಚ್ಚರಿ ವ್ಯಕ್ತಪಡಿಸಿದರು.

ನಿಜ 20 ಗಂಟೆಗಳ ಕಾಲ ನೀರು, ಅನ್ನ, ಗಾಳಿ-ಬೆಳಕು ಇಲ್ಲದೇ ದೊಡ್ಡವರಿಗೆ ಇರಲು ಆಗುವುದಿಲ್ಲ. ಏನೋ ಸಸ್ತು,  ಅಸ್ವಸ್ಥಗೊಳ್ಳುತ್ತಾರೆ. ಇಂತರದಲ್ಲಿ ಕೇವಲ ಎರಡೇ ಎರಡು ವರ್ಷದ ಮಗು ಸಾತ್ವಿಕ್​, ಬರೋಬ್ಬರಿ ಇಪ್ಪತ್ತು ಗಂಟೆಗಳ ಕಾಲ ನೀರು, ಅನ್ನ, ಗಾಳಿ-ಬೆಳಕು ಇಲ್ಲದೇ ಬದುಕಿ ಬಂದಿರುವುದೇ ವಿಸ್ಮಯ. ಅದರಲ್ಲೂ ಆ ಒಂದು ಚಿಕ್ಕ ಪೈಪಿನೊಳಗೆ ಸ್ವಲ್ಪ ಅಲುಗಾಡಲು ಆಗಲ್ಲ. ಅಂತರದಲ್ಲಿ ಸ್ವಾತ್ವಿಕ್ ಬದುಕಿ ಬಂದಿದ್ದಾನೆ. ಇನ್ನೊಂದು ವಿಶೇಷ ಅಂದ್ರೆ ಸಾತ್ವಿಕ್ ಆರೋಗ್ಯದಲ್ಲಿ ಏನು ವ್ಯತ್ಯಾಸ ಕಂಡುಬಂದಿಲ್ಲ. ಸುಸ್ತು. ಅಸ್ವಸ್ಥತೆ ಬಳಲುತ್ತಿರುವುದು ಕಂಡುಬಂದಿಲ್ಲದಿರುವುದೇ ಒಂದು ವೈದ್ಯರಿಗೆ ಅಚ್ಚರಿಯಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಲಚ್ಯಾನ ಗ್ರಾಮದಲ್ಲಿ 2 ವರ್ಷದ ಪುಟ್ಟ ಕಂದ ಸಾತ್ವಿಕ್ ನಿನ್ನೆ(ಏಪ್ರಿಲ್ 04) ಸಂಜೆ 5.30ರ ಸುಮಾರಿಗೆ ಆಟವಾಡುತ್ತ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. 16 ಅಡಿ ಆಳದಲ್ಲಿ ಸಿಲುಕಿದ್ದ. ಬಳಿಕ ವಿಷಯ ತಿಳಿಯುತ್ತಿದ್ದಂತೆಯೇ ತಾಲೂಕು ಮತ್ತು ಜಿಲ್ಲಾಡಳಿ ಅಗ್ನಿ ಶಾಮಕ ದಳ, ಪೊಲೀಸ್​ ಜೊತೆ ಘಟನಾ ಸ್ಥಳಕ್ಕೆ ಆಗಮಿಸಿತ್ಉ. ಬಳಿಕ ಎನ್​ಡಿಆರ್​​ಎಫ್ ಹಾಗೂ ಎಸ್​​ಡಿಆರ್​ಎಫ್​​ ಸಿಬ್ಬಂದಿ ಮಗು ರಕ್ಷಣೆಗೆ ಸಮರೋಪಾದಿಯಲ್ಲಿ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿತ್ತು. ಇತ್ತ ಗ್ರಾಮಸ್ಥರು ಮಾತ್ರವಲ್ಲ ಇಡೀ ಕರುನಾಡು ಸಹ ಸಾತ್ವಿಕನಿಗಾಗಿ ಪ್ರಾರ್ಥನೆ ಮಾಡಿತ್ತು. ಅಂತಿಮವಾಗಿ ಸಾತ್ವಿಕ್​ 20 ಗಂಟೆಗಳ ನಂತರ ಸಾವನ್ನು ಗೆದ್ದು ಆಚೆ ಬಂದಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:13 pm, Thu, 4 April 24

ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಹೊಸ ವರ್ಷಾಚರಣೆ: ಜಗಮಗಿಸುವ ವಾತಾವರಣದಲ್ಲಿ ಕಿಕ್ಕಿರಿದು ಸೇರಿದ ಜನಸಾಗರ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ
ಕಾನೂನಿನ ಚೌಕಟ್ಟಿನಲ್ಲಿ ಹೊಸ ವರ್ಷಾಚರಣೆ ಮಾಡಿ; ಪೊಲೀಸ್ ಕಮಿಷನರ್ ಮನವಿ