ಒಕ್ಕಲಿಗನಲ್ಲ ಅಂತ ಪ್ರತಾಪ್ ಸಿಂಹ ಹೇಳಿದ್ದಕ್ಕೆ ತಹಸೀಲ್ದಾರ್ ನೀಡಿದ ಪ್ರಮಾಣ ಪತ್ರ ತೋರಿಸಿದ ಎಂ ಲಕ್ಷ್ಮಣ
ಸಂಸದ ಪ್ರತಾಪ್ ಸಿಂಹ ಗಂಭೀರವಾದ ಆಕ್ಷೇಪಣೆ ಎತ್ತಿ ಲಕ್ಷ್ಮಣ ಒಕ್ಕಲಿಗ ಅಲ್ಲ ಅಂತಲೂ ಹೇಳಿದ್ದರು. ಆದರೆ ಲಕ್ಷ್ಮಣ ತಾನು ಹುಟ್ಟಿನಿಂದ ಒಕ್ಕಲಿಗೆ ಆದರೆ ಬೆಳೀತಾ ಬೆಳೀತಾ ವಿಶ್ವಮಾನವನಾಗಿದ್ದೇನೆ ಅಂತ ಹೇಳುತ್ತಿದ್ದಾರೆ. ಅಂದರೆ ಅವರು ಎಲ್ಲ ಜಾತಿ ಧರ್ಮಗಳನ್ನು ಸಮಾನವಾಗಿ ಕಾಣುವ ವ್ಯಕ್ತಿಯೆಂದು ಹೇಳಿಕೊಳ್ಳುತ್ತಾರೆ.
ಮೈಸೂರು: ಇವತ್ತು ನಾಡದೇವತೆ ಚಾಮುಂಡೇಶ್ವರಿ (goddess Chamundeshwari) ಸನ್ನಿಧಿಯಲ್ಲಿ ರಾಜಕಾರಣಿಗಳ ದಂಡು, ಬಿಜೆಪಿ ಮತ್ತು ಜೆಡಿಎಸ್ ನಾಯಕರ ಬಳಿಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ (M Laxman) ಮತ್ತು ಕಾರ್ಯಕರ್ತರು ದೇವಿ ಪೂಜೆ ಸಲ್ಲಿಸಿ ಚುನಾವಣೆಯಲ್ಲಿ ಯಶಸ್ಸಿಗಾಗಿ ಪ್ರಾರ್ಥಿಸಿಕೊಂಡರು. ಲಕ್ಷ್ಮಣ ಜಾತಿಯ ಬಗ್ಗೆ ಹಾಲಿ ಸಂಸದ ಪ್ರತಾಪ್ ಸಿಂಹ (Pratap Simha) ಗಂಭೀರವಾದ ಆಕ್ಷೇಪಣೆ ಎತ್ತಿದ್ದಾರೆ ಮತ್ತು ಅವರು ಒಕ್ಕಲಿಗ ಅಲ್ಲ ಅಂತಲೂ ಹೇಳಿದ್ದರು. ಆದರೆ ಲಕ್ಷ್ಮಣ ತಾನು ಹುಟ್ಟಿನಿಂದ ಒಕ್ಕಲಿಗೆ ಆದರೆ ಬೆಳೀತಾ ಬೆಳೀತಾ ವಿಶ್ವಮಾನವನಾಗಿದ್ದೇನೆ ಅಂತ ಹೇಳುತ್ತಿದ್ದಾರೆ. ಅಂದರೆ ಅವರು ಎಲ್ಲ ಜಾತಿ ಧರ್ಮಗಳನ್ನು ಸಮಾನವಾಗಿ ಕಾಣುವ ವ್ಯಕ್ತಿಯೆಂದು ಹೇಳಿಕೊಳ್ಳುತ್ತಾರೆ. ಬಿಡಿ, ಅದು ಚರ್ಚೆಯ ವಿಷಯವಲ್ಲ. ತಾನು ಒಕ್ಕಲಿಗ ಅಂತ ಸಾಬೀತು ಮಾಡಲು ಲಕ್ಷ್ಮಣ ಇಂದು ಮೈಸೂರು ತಾಲ್ಲೂಕು ತಹಸೀಲ್ದಾರ್ ನೀಡಿದ ಪ್ರಮಾಣಪತ್ರವನ್ನು ಮಾಧ್ಯಮಗಳಿಗೆ ತೋರಿಸಿದರು. ನಿನ್ನೆ 4 ವಿಧಾನಸಭಾ ಕಾರ್ಯಕರ್ತರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಬ್ಬರೂ ತಾನು ಒಕ್ಕಲಿಗ ಸಮುದಾಯಕ್ಕೆ ಸೇರಿದವನೆಂದು ಹೇಳಿದ್ದಾರೆ. ಆದರೆ, ಚುನಾವಣಾ ಪ್ರಚಾರದ ವೇಳೆ ಪ್ರತಾಪ್ ಸಿಂಹ ಮತ್ತು ಬಿಜೆಪಿ ನಾಯಕರು ಸುಳ್ಳು ಹೇಳಲು ಯಾವ ಹಂತಕ್ಕೆ ಬೇಕಾದರೂ ಇಳಿಯುತ್ತಾರೆ ಎಂದು ಲಕ್ಷ್ಮಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ