ಕೋಲಾರದ ಶಾಸಕರ‍್ಯಾರೂ ರಾಜೀನಾಮೆ ಕೊಡಲ್ಲ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ: ಡಿಕೆ ಶಿವಕುಮಾರ್
ಯಾರೂ ರಾಜೀನಾಮೆ ನೀಡಲ್ಲ, ಅಸಲಿಗೆ ಅಭ್ಯರ್ಥಿಯ ಘೋಷಣೆ ಇನ್ನೂ ಆಗಬೇಕಿದೆ, ಕೋಲಾರ ಭಾಗದ ಶಾಸಕರ ಒಂದು ಆಗ್ರಹವಿದೆ ಮತ್ತು ಅದನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೇರೆ ನಾಯಕರ ಜೊತೆ ಚರ್ಚಿಸುವುದಾಗಿ ಶಿವಕುಮಾರ್ ಹೇಳಿದರು.
ಬೆಂಗಳೂರು: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟನ್ನು ಸಚಿವ ಕೆಹೆಚ್ ಮುನಿಯಪ್ಪ (KH Muniyappa) ಅಳಿಯನಿಗೆ ನೀಡಬಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ನಿನ್ನೆ ಕೋಲಾರ ಭಾಗದ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರು ಸೃಷ್ಟಿಸಿದ ರಾಜೀನಾಮೆ ಡ್ರಾಮಾಗೆ (resignation drama) ಸಂಬಂಧಿಸಿದಂತೆ ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ಯಾರೂ ರಾಜೀನಾಮೆ ನೀಡಲ್ಲ, ಅಸಲಿಗೆ ಅಭ್ಯರ್ಥಿಯ ಘೋಷಣೆ ಇನ್ನೂ ಆಗಬೇಕಿದೆ, ಕೋಲಾರ ಭಾಗದ ಶಾಸಕರ ಒಂದು ಆಗ್ರಹವಿದೆ ಮತ್ತು ಅದನ್ನು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೇರೆ ನಾಯಕರ ಜೊತೆ ಚರ್ಚಿಸುವುದಾಗಿ ಹೇಳಿದರು. ಎಲ್ಲರೂ ದಾರಿಗೆ ಬಂದಿದ್ದಾರೆ ಅಂತ ಶಿವಕುಮಾರ್ ಹೇಳುವುದನ್ನು ನೀವು ಕೇಳಿಸಿಕೊಳ್ಳಬಹುದು. ಅಂದರೆ ರಾಜೀನಾಮೆ ನೀಡುತ್ತೇವೆಂದ ಶಾಸಕರನ್ನು ಅವರು ಈಗಾಗಲೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದುವರಿದು ಮಾತಾಡಿದ ಶಿವಕುಮಾರ್ ಎಲ್ಲರೂ ಒಗ್ಗಟ್ಟಿನಿಂದಿದ್ದಾರೆ, ಎಲ್ಲ ಶಾಸಕರು ಮತ್ತು ಕಾರ್ಯಕರ್ತರು ಒಂದುಗೂಡಿ ಕೆಲಸ ಮಾಡಲಿದ್ದಾರೆ, ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ಪಕ್ಷದ ಗುರಿಯಾಗಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿಕೆಶಿ ಸಿಎಂ ಆಗಲೆಂದು ಗೋಕರ್ಣದಲ್ಲಿ ಅರ್ಚಕರ ಸಂಕಲ್ಪ, ಅದರಲ್ಲಿ ತಪ್ಪೇನಿಲ್ಲವೆಂದ ಡಿಕೆ ಶಿವಕುಮಾರ್