CM ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನ ತಗೆದು ಹಾಕಿಲ್ಲ: ಡಿಕೆಶಿ ಬಗ್ಗೆ ರಾಯರೆಡ್ಡಿ ಸ್ಪೋಟಕ ಹೇಳಿಕೆ
ಮುಖ್ಯಾಂಶಗಳು
- CM ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನ ತಗೆದು ಹಾಕಿಲ್ಲ
- ಡಿಕೆ ಶಿವಕುಮಾರ್ ಮತ್ತೊಬ್ಬರನ್ನ ನೇಮಕ ಮಾಡಿಕೊಂಡಿದ್ದರೆ ತಪ್ಪೇನಿದೆ
- ಕೊಪ್ಪಳದಲ್ಲಿ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿಕೆ
ಶಾಸಕ ಬಸವರಾಜ ರಾಯರೆಡ್ಡಿಯವರು ಸಿದ್ದರಾಮಯ್ಯನವರ ಆಪ್ತರಾಗಿದ್ದರೂ ಸಹ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಡಿಕೆ ಶಿವಕುಮಾರ್, ಎಲ್.ಕೆ.ಅತೀಕ್ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ಇನ್ನು ಈ ಬಗ್ಗೆ ಕೊಪ್ಪಳದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನನ್ನು ತೆಗೆದು ಹಾಕಿಲ್ಲ. ಸಿಎಂ ಬದಲಾವಣೆ ನಂತರ ಡಿಕೆಶಿ ಮತ್ತೊಬ್ಬರನ್ನು ನೇಮಿಸಿದ್ದಾರೆ. ಅದರಲ್ಲಿ ತಪ್ಪೇನಿದೆ? ಆರ್ಡರ್ ಮಾಡಲೇಬೇಕು, ಹಾಗಾಗಿ ಆರ್ಡರ್ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ವಿರುದ್ಧವಾಗಿ ಇಲ್ಲ ಎಂದಿದ್ದಾರೆ.
ಕೊಪ್ಪಳ, (ಜುಲೈ 03): ಶಾಸಕ ಬಸವರಾಜ ರಾಯರೆಡ್ಡಿಯವರು (Basavaraj Rayareddy) ಸಿದ್ದರಾಮಯ್ಯನವರ (Siddaramaiah) ಆಪ್ತರಾಗಿದ್ದರೂ ಸಹ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಇದರಿಂದ ಅವರನ್ನು ಸಿಎಂ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಡಿಕೆ ಶಿವಕುಮಾರ್ (DK Shivakumar), ಎಲ್.ಕೆ.ಅತೀಕ್ ಅವರನ್ನು ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ಇನ್ನು ಈ ಬಗ್ಗೆ ಕೊಪ್ಪಳದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರಾಯರೆಡ್ಡಿ, ಸಿಎಂ ಆರ್ಥಿಕ ಸಲಹೆಗಾರ ಹುದ್ದೆಯಿಂದ ನನ್ನನ್ನು ತೆಗೆದು ಹಾಕಿಲ್ಲ. ಸಿಎಂ ಬದಲಾವಣೆ ನಂತರ ಡಿಕೆಶಿ ಮತ್ತೊಬ್ಬರನ್ನು ನೇಮಿಸಿದ್ದಾರೆ. ಅದರಲ್ಲಿ ತಪ್ಪೇನಿದೆ? ಆರ್ಡರ್ ಮಾಡಲೇಬೇಕು, ಹಾಗಾಗಿ ಆರ್ಡರ್ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ವಿರುದ್ಧವಾಗಿ ಇಲ್ಲ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
